ಭಾರತ, ಫೆಬ್ರವರಿ 4 -- Hubballi Shootout: ಹುಬ್ಬಳ್ಳಿ ನಗರದ ಹೊರ ವಲಯದಲ್ಲಿ ಇಂದು (ಫೆ 4) ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಗಮನಸೆಳೆಯಿತು. ಹೌದು ಪೊಲೀಸ್ ಶೂಟ್‌ಔಟ್ ನಡೆದಿದ್ದು, ಗುಜರಾತ್ ಮೂಲದ ಇಬ್ಬರು ದರೋಡೆಕೋರರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಗಬ್ಬೂರ ಬಳಿ ಮಂದಿರದಲ್ಲಿ ಕಳ್ಳತನ, ಮನೆಗಳ್ಳತನ ಹಾಗೂ ಬೈಕ್ ಸವಾರರನ್ನು ತಡೆದು ಸುಲಿಗೆ ಮಾಡುತ್ತಿದ್ದ ಗುಜರಾತ್ ಮೂಲದ ಇಬ್ಬರು ದರೋಡೆಕೋರರಿಗೆ ಬೆಂಡಿಗೇರಿ ಠಾಣೆ ಪೊಲೀಸರು ಮಂಗಳವಾರ ಬೆಳಿಗ್ಗೆ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಬಂಧಿತರನ್ನು ಗುಜರಾತ್ ಮೂಲದ ದಿಲೀಪ್‌ ಬಾಯಿ, ನಿಲೇಶ್‌ ಬಾಯಿ ಎಂದು ಗುರುತಿಸಲಾಗಿದೆ. ಈ ಇಬ್ಬರಿಗೂ ಗುಂಡೇಟು ತಗುಲಿದ್ದು, ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೂ ಮೂವರು ಪರಾರಿಯಾಗಿದ್ದಾರೆ.

ಹುಬ್ಬಳ್ಳಿ ಹೊರವಲಯದಲ್ಲಿ ಬೆಂಡಿಗೇರಿ ಪೊಲೀಸರಿಂದ ಬಂಧನಕ್ಕೆ ಒಳಗಾದ ದರೋಡೆಕೋರರು, ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಾಲ್ಕೈದು ಜನರ ತಂಡವು ಗುಜರಾತ್‌ನಿಂದ ಇಲ್ಲಿಗೆ ಬಂದು ಮಂದ...