ಭಾರತ, ಏಪ್ರಿಲ್ 15 -- PSI Annapurna: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ರಿತೇಶ್‌ನನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣಾ ಮುಕ್ಕಣ್ಣವರ ಸಾಹಸಕ್ಕೆ ಇಡೀ ರಾಜ್ಯವೇ ಬಹು ಪರಾಕ್ ಎನ್ನುತ್ತಿದೆ. ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿ, ಕೊಲೆ ಮಾಡುವ ಮೂಲಕ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದ ದುರುಳನ ಕಥೆ ಮುಗಿಸಿದ ಗಟ್ಟಿಗಿತ್ತಿ ಯಾರು ಎಂಬ ಕುತೂಹಲ ಸಹಜ. ಇಲ್ಲಿದೆ ಅವರ ಕಿರುಪರಿಚಯ.

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಪ್ರಕರಣ ಜನರನ್ನು ರೊಚ್ಚಿಗೆಬ್ಬಿಸಿತ್ತು. ಜಾತಿ, ಮತ, ಪಂಥಗಳನ್ನೆಲ್ಲ ಬಿಟ್ಟು ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಬೀದಿಗಿಳಿದು ಜನ ಪ್ರತಿಭಟನೆ ಶುರು ಮಾಡಿದ್ದರು. ಸಾರ್ವಜನಿಕರ ಪ್ರತಿಭಟನೆಯ ಕಾರಣ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಹೀಗಾಗಿ, ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ ಅವರು, ಐದು ತಂಡ ರಚನೆ ಮಾಡಿದ್ದರು. ಅಲ್ಲದೆ, ಏನೇ ಆದರೂ ಇನ್ನೆರಡು ಗಂಟೆಯಲ್ಲಿ ಆರೋಪಿಯನ್ನೇ ಬ...