Bengaluru, ಏಪ್ರಿಲ್ 16 -- ಹುಬ್ಬಳ್ಳಿಯಲ್ಲಿ ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ವೆಸಗಿದ ದುರುಳನನ್ನು ಎನ್‌ಕೌಂಟರ್ ಮೂಲಕ ಇಲ್ಲವಾಗಿಸಿದ ದಿಟ್ಟೆ ಪಿಎಸ್ಐ ಅನ್ನಪೂರ್ಣಾ ಮುಕ್ಕಣ್ಣವರ. ಅವರ ಪರಿಚಯ, ಫೋಟೋಸ್‌ಗಾಗಿ ಜಾಲತಾಣಗಳಲ್ಲಿ ಹುಡುಕಾಟ ನಡೆದಿದೆ. ಹಾಗೆ ಅವರ ಜನಪ್ರಿಯತೆ ಹೆಚ್ಚಾಗತೊಡಗಿದೆ.

ಫೇಸ್‌ಬುಕ್‌, ಟ್ವಿಟರ್‌, ಸೋಷಿಯಲ್ ಮೀಡಿಯಾದಲ್ಲಿ ಅನ್ನಪೂರ್ಣಾ ಮುಕ್ಕಣ್ಣವರ ಅವರಿಲ್ವ? ಎಂಬಿತ್ಯಾದಿ ಪ್ರಶ್ನೆಗಳೂ ಸಹಜವಾಗಿಯೆ ಕೇಳಿಬಂದಿವೆ. ಅವರ ಫೋಟೋಸ್‌ಗಾಗಿ ತಲಾಶ್ ನಡೆದೇ ಇದೆ.

ಪಿಎಸ್‌ಐ ಅನ್ನಪೂರ್ಣಾ ಮುಕ್ಕಣ್ಣವರ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗುಜನಗಟ್ಟಿ ಗ್ರಾಮದವರು. ರೈತ ಕುಟುಂಬದ ಹಿನ್ನೆಲಯಿಂದ ಬಂದವರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಗರಡಿಯಲ್ಲಿ ಪಳಗಿದವರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದು, ಬೆಂಗಳೂರಿನ ಜೆಕೆವಿಕೆಯಲ್ಲಿ ಎಂಎಸ್‌ಸಿ ಪದವಿಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಅನ್ನಪೂರ್ಣಾ ಮುಕ್ಕಣ್ಣವರ ಅವರಿಗೆ ಪೊಲೀಸ್ ಆಗಬೇಕು ಎಂಬ ಆಸೆ ಇತ್ತು.

ರೈತ ಮ...