ಭಾರತ, ಫೆಬ್ರವರಿ 23 -- ಹುಬ್ಬಳ್ಳಿ : 'ಮಾನವೀಯತೆ ನೆಲೆ ನಿಂತಿಹುದು ಮಂಕುತಿಮ್ಮ' ಎಂಬ ಡಿವಿಜಿಯವರ ನುಡಿಯಂತೆ ನಗರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ವ್ಯಕಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಶನಿವಾರ (ಫೆ.22) ರಾತ್ರಿಯ ರೌಂಡ್ಸ್‌ ವೇಳೆ ಹುಬ್ಬಳ್ಳಿ ನಗರದ ಪೂರ್ವ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜರವರು ಗಸ್ತು ಕರ್ತವ್ಯದಲ್ಲಿದ್ದಾಗ ಘಟನೆ ನಡೆದಿದೆ. ರಾತ್ರಿ ಸುಮಾರು 1 ಗಂಟೆಯ ವೇಳೆ ಸುಮಾರು 45 ವರ್ಷದ ಮುಷ್ತಾಕ್ ಎಂಬ ವ್ಯಕ್ತಿಗೆ ನಗರದ ಕೆಎಂಸಿ ಮುಂಭಾಗದ ರಸ್ತೆಯಲ್ಲಿ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿತ್ತು. ಅವರು ಓಡಿಸುತ್ತಿದ್ದ ದ್ವಿಚಕ್ರವಾಹನದಿಂದ ಬಿದ್ದು ರಸ್ತೆಯಲ್ಲಿ ಒದ್ದಾಡುತ್ತಿದ್ದರು.

ಈ ಸಮಯದಲ್ಲಿ ಸ್ಥಳಕ್ಕೆ ಬಂದ ಪಿಐ ಡಿಸೋಜರವರು ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ತಾವು ಸಂಚರಿಸುವ ಇಲಾಖಾ ವಾಹನದಲ್ಲಿಯೇ ತುರ್ತಾಗಿ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಸಕಾಲದಲ್ಲ...