ಭಾರತ, ಮಾರ್ಚ್ 4 -- ಹುಬ್ಬಳ್ಳಿ: ಸಿವಿಲ್ ಗುತ್ತಿಗೆದಾರರು ನಿರ್ವಹಿಸಿದ ಗುತ್ತಿಗೆದಾರರ ಬಾಕಿ ಬಿಲ್ಲನ್ನು 15 ದಿನದೊಳಗೆ ಪಾವತಿಸಬೇಕು. ಬಾಕಿ ಉಳಿದ 180 ಕೋಟಿ ಬಿಲ್ಲಿನಲ್ಲಿ 100 ಕೋಟಿ ತಕ್ಷಣ ಪಾವತಿಸದೆ ಹೋದಲ್ಲಿ ಪಾಲಿಕೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಪಂಪಣ್ಣ ಅಂಬಿಗೇರ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಆಯುಕ್ತರಿಗೆ, ಲೆಕ್ಕಾಧಿಕಾರಿಗಳಿಗೆ ಹಾಗೂ ಮಹಾಪೌರರಿಗೆ ಎಚ್ಚರಿಸಿದ್ದಾರೆ. ಈ ವಿಚಾರವಾಗಿ ಈ ಹಿಂದೆ ಅನಿರ್ಧಿಷ್ಟವಧಿ ಮುಷ್ಕರವನ್ನು ಪಾಲಿಕೆ ಮುಂದೆ ಹಮ್ಮಿಕೊಳ್ಳಲಾಗಿತ್ತು. ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಹಾಪೌರರಿಗೆ ಹಾಗೂ ಆಯುಕ್ತರಿಗೆ ಸೂಚಿಸಿದ್ದರು. ಆದರೆ ಆ ನಂತರ ಈ ಕುರಿತು ಚಕಾರವೆತ್ತಿಲ್ಲ. ಪಾಲಿಕೆಯು ಸಂಪೂರ್ಣ ದಿವಾಳಿಯಾಗಿದ್ದು ...