Hubballi, ಫೆಬ್ರವರಿ 28 -- Hubballi Ajjana Jatre 2025: ಉತ್ತರ ಕರ್ನಾಟಕದ ಜನರ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಮಹಾರಥೋತ್ಸವ ಗುರುವಾರ (ಫೆ 27) ಸಂಜೆ ಸಂಭ್ರಮ, ಸಡಗರಗಳೊಂದಿಗೆ ಸಂಪನ್ನಗೊಂಡಿತು. ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ, ಜೈ ಜೈ ಸಿದ್ಧಾರೂಢ, ಹುಬ್ಬಳ್ಳಿ ಎಂಬುದು ಕಲ್ಯಾಣ, ಸಿದ್ಧಾರೂಢ ಬಸವಣ್ಣ, ಸಿದ್ದಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ ಸೇರಿದಂತೆ ಹಲವಾರು ಜಯಘೋಷಗಳ ನಡುವೆ ಹುಬ್ಬಳ್ಳಿಯ ಅಜ್ಜನ ಜಾತ್ರೆ ಅದ್ದೂರಿಯಾಗಿ ನಡೆಯಿತು.

ಈ ಸಲ ಹುಬ್ಬಳ್ಳಿಯ ಅಜ್ಜನ ಜಾತ್ರೆಗೆ ಮೆರಗು ನೀಡಿದ್ದು ಸದ್ಗುರು ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಆಚರಣೆ. ಶಿವಾರಾತ್ರಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೂ ಮಠಕ್ಕೆ ಆಗಮಿಸಿದ ಭಕ್ತರ ಸಂಖ್ಯೆಯೂ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಮಠಕ್ಕೆ ಬರುವ ಎಲ್ಲ ರಸ್ತೆಗಳು ತುಂಬಿ ತುಳುಕುತ್ತಿದ್ದವು. ಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಸಿವೆ ಹಾಕಿದರೂ ನೆಲಕ್ಕೆ ಬೀಳದಂತೆ ಭಕ್ತಜನ ತುಂಬಿದ್ದರು.

ನಿನ್ನೆ (ಫೆ 26) ಮಧ್ಯಾಹ್ನ ಉಭಯ ಶ್ರೀಗಳ ಪಲ್...