ಭಾರತ, ಏಪ್ರಿಲ್ 25 -- ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿರುವ ಶ್ರೀಶೈಲ ಮಹಾಕ್ಷೇತ್ರವನ್ನು ಭೂಮಿಯ ಮೇಲಿನ ಕೈಲಾಸವೆಂದು ಪರಿಗಣಿಸಲಾಗಿದೆ. ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿರುವ ಶ್ರೀಶೈಲಕ್ಕೆ ಭೇಟಿ ನೀಡುವುದರಿಂದ ಗಳಿಸುವ ಪುಣ್ಯವು ಬ್ರಹ್ಮಾಂಡದಲ್ಲಿರುವ ಎಲ್ಲಾ ದೈವಿಕ ಶಕ್ತಿಯನ್ನು ಪೂಜಿಸುವುದಕ್ಕೆ ಸಮಾನವಾಗಿದೆ ಎಂದು ಇತಿಹಾಸ ಮತ್ತು ಸಂಪ್ರದಾಯಗಳು ಹೇಳುತ್ತವೆ.

ಶ್ರೀಶೈಲ ಮಹಾಕ್ಷೇತ್ರವು ಪ್ರಾಚೀನ ಮತ್ತು ಅಧ್ಯಾತ್ಮಿಕ-ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಮೌಲ್ಯಗಲ ಜೀವಂತಕ್ಕೆ ಸಾಕ್ಷಿಯಾಗಿದೆ. ಶ್ರೀರಾಮ, ಆದಿ ಶಂಕರಾಚಾರ್ಯ ಹಾಗೂ ಇತರೆ ಹಲವಾರು ಅಧ್ಯಾತ್ಮಿಕ ವ್ಯಕ್ತಿಗಳ ಜೊತೆಗೆ ಮಹಾನ್ ಸಂತರು ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ. ಶ್ರೀಶೈಲವು ಅಧ್ಯಾತ್ಮಿಕ ಸತ್ಯದ ಅತ್ಯುನ್ನತ ಭಂಡರವಾಗಿದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವೇನಾದರೂ ಉತ್ತರ ಕರ್ನಾಟಕದ ಭಾಗದವರಾಗಿದ್ದು ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಬೇಕೆಂದರೆ ರೈಲು ಸೇವೆಗಳು ಬಗ್ಗೆ ತಿಳಿಯಬೇಕು. ಇವರ ಸಂಪೂರ್ಣ ವಿವರಗಳನ್ನು ಇ...