Mysore, ಮಾರ್ಚ್ 9 -- ಮೈಸೂರು ದಸರಾದಲ್ಲಿ ಅತ್ಯಂತ ಸೌಮ್ಯ ಆನೆಯಾಗಿ ಅಂಬಾರಿ ಹೊತ್ತ ಬಲರಾಮ ಆನೆ ಎರಡು ವರ್ಷದ ಹಿಂದೆ ತೀರಿಕೊಂಡಿದ್ದು ಆ ಆನೆಗೂ ಸ್ಮಾರಕ ನಿರ್ಮಿಸಿ ಎಂದು ಮೈಸೂರು ಕೊಡಗು ಸಂಸದ ಯದುವೀರ್‌ ಒಡೆಯರ್‌ ಕರ್ನಾಟಕ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅತ್ಯಂತ ಸೌಮ್ಯ ಸ್ವಭಾವದ, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದ ದಸರಾ ಆನೆ ಬಲರಾಮ ಅಂಬಾರಿಯನ್ನೂ ಹದಿನಾಲ್ಕು ಬಾರಿ ಹೊತ್ತಿ ಇತಿಹಾಸ ನಿರ್ಮಿಸಿದೆ.

ಬಲರಾಮ ಆನೆಗೆ 60 ವರ್ಷ ಆದ ಕಾರಣದಿಂದ ಅಂಬಾರಿ ಹೊರಿಸುವ ಕಾರ್ಯದಿಂದ ವಿರಾಮ ನೀಡಲಾಗಿತ್ತು. ಇದಾದ ನಂತರವೂ ಬಲರಾಮ ಆನೆ ದಸರಾಕ್ಕೆ ಬಂದಿತ್ತು.

1987 ರಲ್ಲಿ ಕೊಡಗಿನ ಕಟ್ಟೆಪುರ ಅರ‍ಣ್ಯದಲ್ಲಿ ಸೆರೆ ಸಿಕ್ಕಿದ್ದ ಬಲರಾಮ ಆನಂತರ ಆನೆ ಶಿಬಿರದಲ್ಲಿ ತಾಲೀಮು ಪಡೆದು ದಸರಾದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಭಾಗಿಯಾಗಿದ್ದಾನೆ,

ಆರು ವರ್ಷದ ಹಿಂದೆ ಅರ್ಜುನ ಅಂಬಾರಿ ಹೊತ್ತಿದ್ದೆ ಕಡೆ. ಅದಾದ ನಂತರ ಬಲರಾಮನಿಗೆ ಕರ್ನಾಟಕ ಅರಣ್ಯ ಇಲಾಖೆ ವಿಶ್ರಾಂತಿ ನೀಡಿತ್ತು.

ನಾಗರಹೊಳೆ ಅರ...