ಭಾರತ, ಫೆಬ್ರವರಿ 14 -- ಪ್ರಶ್ನೆ: ಅಲ್ಲ ಮೇಡಂ, ನಿಮ್ಮಂಥವರು ಪ್ರೀತಿ, ಪ್ರೇಮ ಅಂತೆಲ್ಲ ಬರೆಯುವಾಗ ಕೇವಲ ಹುಡುಗಿಯರ ಬಗ್ಗೆಯೇ ಬರೀತೀರಿ. ಹುಡುಗರಿಗೆ ಭಾವನೆಗಳೇ ಇರಲ್ವಾ? ಹುಡುಗರಿಂದ ಮಾತ್ರವೇ ಹುಡುಗಿಯರಿಗೆ ಯಾವಾಗಲೂ ಮೋಸ ಆಗುವುದಾ? ಹುಡುಗಿಯರಿಂದ ಎಷ್ಟು ಹುಡುಗರಿಗೆ ಮೋಸ ಆಗಿದೆ ಗೊತ್ತಾ ನಿಮಗೆ? ಫೇಕ್‌ ಲವ್, ಸೆಲ್ಫಿಷ್ ಲವ್, ದುರಾಸೆ ಇಟ್ಕೊಂಡು ಪ್ರಪೋಸ್ ಮಾಡೋ ಹುಡುಗಿಯರನ್ನು ಗುರುತಿಸೋದು ಹೇಗೆ? ಹುಡುಗರು ಹೇಗೆ ಎಚ್ಚರವಹಿಸಬಹುದು ನೀವಾದರೂ ತಿಳಿಸಿಕೊಡಿ ಮೇಡಂ. -ರಾಕೇಶ, ಮಂಗಳೂರು

ಉತ್ತರ: ಒಳ್ಳೆಯ ಪ್ರಶ್ನೆ. ಭಾವನೆಗಳು ಹೆಣ್ಣಿಗೆ ಮತ್ತು ಗಂಡಿಗೆ ಇಬ್ಬರಿಗೂ ಕೂಡ ಒಂದೇ ರೀತಿಯಲ್ಲಿ ಇರುತ್ತವೆ. ಹೆಣ್ಣಿಗೆ ಮಾತ್ರ ಭಾವನೆಗಳು ಹೆಚ್ಚು, ಗಂಡಿಗೆ ಭಾವನೆಗಳು ಕಡಿಮೆ ಅಥವಾ ಗಂಡಸಿಗೆ ಭಾವನೆಗಳು ಇರಲೇಬಾರದು ಎಂಬ ಅನಿಸಿಕೆ ಸರಿಯಲ್ಲ. ನೋವು, ನಲಿವು, ಪ್ರೀತಿ, ವಿಶ್ವಾಸ ಇಬ್ಬರಿಗೂ ಸಮನಾಗಿರುತ್ತದೆ. ಆದರೆ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಮಾತ್ರ ಭಿನ್ನವಾಗಿರಬಹುದು. ಹಾಗೆಂದು ಭಿನ್ನವಾಗಿರಲೇಬೇಕೆಂದು ಇಲ್ಲ. ವಿಶೇಷವ...