ಭಾರತ, ಫೆಬ್ರವರಿ 8 -- ಮದುವೆ ಸ್ವರ್ಗದಲ್ಲೇ ನಿರ್ಧಾರವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಸಮಯ, ಸಂದರ್ಭ ಕೂಡಿ ಬಂದಾಗ ಕಂಕಣ ಭಾಗ್ಯ ಸಾಧ್ಯ. ಇದೇ ವೇಳೆ, ಸಪ್ತಪದಿ ತುಳಿಯಬೇಕೆಂದರೆ ಮನಸ್ಸು ಮನಸುಗಳ ನಡುವೆ ಒಪ್ಪಿಗೆಯಾಗಬೇಕು. ಹುಡುಗ ಚೆನ್ನಾಗಿಲ್ಲ, ಬುದ್ಧಿ ಸರಿಯಿಲ್ಲ ಹೀಗೆ ಕೆಲವು ಕಾರಣಗಳಿಂದ ಮದುವೆ ರದ್ದಾಗುವುದನ್ನೂ ಕೇಳಿದ್ದೇವೆ. ಆದರೆ, ಇಲ್ಲೊಂದು ಕಡೆ ಹುಡುಗನ ಸಿಬಿಲ್‌ ಸ್ಕೋರ್‌ ಕಡಿಮೆ ಇದೆ ಎಂದು ಹುಡುಗಿ ಕಡೆಯವರು ಮದುವೆ ನಿರಾಕರಿಸಿದ್ದಾರೆ. ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಈ ಘಟನೆ ನಡೆದಿದೆ.

ಮದುವೆಗೆ ಎರಡೂ ಕುಟುಂಬಗಳ ಒಪ್ಪಿಗೆ ಇರಬೇಕು. ಆ ಸಮಯದಲ್ಲಿ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ. ಅದರಲ್ಲೂ ಅರೇಂಜ್ ಮ್ಯಾರೇಜ್‌ ಎಂಬ ವಿಷಯ ಬಂದಾಗ ಅಳೆದು ತೂಗಿ ನಿರ್ಧಾರ ಮಾಡಲಾಗುತ್ತದೆ. ಈ ನಡುವೆ ಮಹಾರಾಷ್ಟ್ರದಲ್ಲಿ ನಡೆದ ಘಟನೆ, ಅಚ್ಚರಿ ಮೂಡಿಸುವಂತಿದೆ. ಹುಡುಗಿ ಕಡೆಯವರು ಅಸಮಾನ್ಯ ಕಾರಣವೊಂದನ್ನು ನೀಡಿ, ಹುಡುಗನನ್ನು ರಿಜೆಕ್ಟ್‌ ಮಾಡಿದ್ದಾರೆ. ಅದುವೇ ಬ್ಯಾಂಕ್‌ ಸಿಬಿಲ್ ಸ್ಕೋರ್....