Dakshina kannada, ಏಪ್ರಿಲ್ 24 -- ಮಂಗಳೂರು: ಕನ್ನಡವಷ್ಟೇ ಅಲ್ಲ, ಹಲವು ಭಾರತೀಯ ಭಾಷೆಗಳ ರಂಗಭೂಮಿ, ಸಿನಿಮಾ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಿದ, ಮೈಸೂರು ರಂಗಾಯಣದ ಸ್ಥಾಪಕ ನಿರ್ದೇಶಕ ಬಿ.ವಿ.ಕಾರಂತ - ಬಾಬುಕೋಡಿ ವೆಂಕಟರಮಣ ಕಾರಂತ (19 ಸೆಪ್ಟೆಂಬರ್ 1939 - 1 ಸೆಪ್ಟೆಂಬರ್ 2002) ಎಲ್ಲರಿಗೂ ಗೊತ್ತು. ಬಾರತೀಯ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲಿ ನಿರ್ದೇಶಕ, ನಾಟಕಕಾರ, ನಟ, ಚಿತ್ರಕಥೆಗಾರ, ಸಂಯೋಜಕ ಮತ್ತು ನಾಟಕಕಾರ ರಾಗಿ ಅವರು ಗುರುತಿಸಿಕೊಂಡಿದ್ದಾರೆ. ಸಮಾನಾಂತರ ಸಿನಿಮಾದ ಪ್ರವರ್ತಕರಲ್ಲಿ ಒಬ್ಬರಾದ ಕಾರಂತ, ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ನಂತರ ಅದರ ನಿರ್ದೇಶಕರಾಗಿದ್ದವರು ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 1976ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಗರಿಕ ಗೌರವ ಪದ್ಮಶ್ರೀಯನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಬಾಬುಕೋಡಿ ಅವರ ಹುಟ್ಟೂರು. ಈ ಹಿನ್ನೆಲೆಯಲ್ಲಿ ಕಾರಂತರ ...