ಭಾರತ, ಮೇ 2 -- ಸುಹಾಸ್ ಶೆಟ್ಟಿ ಅಂತ್ಯ ಸಂಸ್ಕಾರ: ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅಂತಿಮಯಾತ್ರೆ ಮಂಗಳೂರಿನ ಆಸ್ಪತ್ರೆಯಿಂದ ಕಾರಿಂಜದಲ್ಲಿರುವ ಅವರ ನಿವಾಸಕ್ಕೆ ತೆರಳಿದ ಸಂದರ್ಭ ಮಾರ್ಗದ ಉದ್ದಕ್ಕೂ ಅಭಿಮಾನಿಗಳು ಸೇರಿಕೊಂಡರು. ಬಜರಂಗದಳದ ಆಂಬುಲೆನ್ಸ್‌ನಲ್ಲಿ ಅವರ ಶವವನ್ನು ಕರೆತಂದ ಸಂದರ್ಭ ದಾರಿಯುದ್ದಕ್ಕೂ ಹಿಂದು ಸಂಘಟನೆ ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿದರು.

ಫರಂಗಿಪೇಟೆ, ತುಂಬೆ ಕಡೆಗೋಳಿ, ಬಿ.ಸಿ.ರೋಡ್, ಬಂಟ್ವಾಳ, ವಗ್ಗ ಮೂಲಕ ಕಾರಿಂಜದ ಅವರ ನಿವಾಸಕ್ಕೆ ತೆರಳಿದಾಗ ಮಧ್ಯಾಹ್ನವಾಗಿತ್ತು. ಅಷ್ಟರಾಗಲೇ ಬೈಕ್, ಕಾರುಗಳಲ್ಲಿ ಅಭಿಮಾನಿಗಳು ಆಗಮಿಸಿ, ಮನೆಗೆ ತೆರಳುವ ದಾರಿಯನ್ನು ಸಮತಟ್ಟು ಮಾಡಿ ವಾಹನ ಬರಲು ಅನುವುಮಾಡಿಕೊಟ್ಟರು. ಅಂತಿಮ ಕಾರ್ಯಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದರು.

ಬಿಜೆಪಿ, ವಿ.ಎಚ್. ಪಿ. ವರಿಷ್ಠರು, ಆರೆಸ್ಸೆಸ್ ಮುಖಂಡರು, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಸುಹಾಸ್ ಮನೆಗೆ ಭೇಟಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿ...