Bengaluru, ಏಪ್ರಿಲ್ 24 -- ಅರ್ಥ: ಪಾರ್ಥ, ತಮ್ಮ ಎಲ್ಲ ಕರ್ಮಗಳನ್ನೂ ನನಗೆ ಅರ್ಪಿಸಿ, ನಿಶ್ಚಲವಾಗಿ ನನ್ನಲ್ಲಿ ಭಕ್ತಿ ಇಟ್ಟು, ಭಕ್ತಿಸೇವೆಯಲ್ಲಿ ನಿರತರಾಗಿ ಸದಾ ನನ್ನನ್ನೇ ಧ್ಯಾನಿಸುತ್ತ, ನನ್ನಲ್ಲೇ ಮನಸ್ಸನ್ನು ನಿಲ್ಲಿಸಿ ನನ್ನನ್ನು ಪೂಜಿಸುವವರನ್ನು, ನಾನು ಹುಟ್ಟು, ಸಾವುಗಳ ಸಂಸಾರ ಸಾಗರದಿಂದ ಶೀಘ್ರವಾಗಿ ಉದ್ಧಾರ ಮಾಡುತ್ತೇನೆ.

ಭಾವಾರ್ಥ: ಭಗವಂತನು ಭಕ್ತರನ್ನು ಐಹಿಕ ಅಸ್ತಿತ್ವದಿಂದ ಬಹು ಶೀಘ್ರವಾಗಿ ಉದ್ಧರಿಸುವುದರಿಂದ ಅವರು ಅದೃಷ್ಟವಂತರು ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಪರಿಶುದ್ಧ ಭಕ್ತಿಸೇವೆಯಲ್ಲಿ ಮನುಷ್ಯನಿಗೆ ಭಗವಂತನು ದೊಡ್ಡವನು, ವ್ಯಕ್ತಿಗತ ಆತ್ಮನು ಭಗವಂತನಿಗೆ ಅಧೀನ ಎನ್ನುವ ಅರಿವು ಬರುತ್ತದೆ. ಭಗವಂತನಿಗೆ ಸೇವೆ ಸಲ್ಲಿಸುವುದೇ ಅವನ ಕರ್ತವ್ಯ. ಸಲ್ಲಿಸದಿದ್ದರೆ, ಅವನು ಮಾಯೆಗೆ ಸೇವಕನಾಗುತ್ತಾನೆ.

ಹಿಂದೆಯೇ ಹೇಳಿದಂತೆ, ಭಕ್ತಿಸೇವೆಯ ಮೂಲಕ ಮಾತ್ರ ಜೀವಿಯು ಪರಮ ಪ್ರಭುವಿನ ಬಳಿಗೆ ಹೋಗಲು ಸಾಧ್ಯ. ಆದುದರಿಂದ ಮನುಷ್ಯನಿಗೆ ಸಂಪೂರ್ಣ ಭಕ್ತಿ ಇರಬೇಕು. ಕೃಷ್ಣನನ್ನು ಸೇರಲು ತನ್ನ ಮನಸ್ಸನ್ನು ಸಂಪೂರ್ಣವ...