Bengaluru, ಮೇ 4 -- ಮಂಗಳೂರು: ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಇಲ್ಲೊಬ್ಬರು ಉದ್ಯಮಿ ತನ್ನ ಸಂಸ್ಥೆಯ ಕಾರ್ಮಿಕರನ್ನು ವಿಮಾನ ಹತ್ತಿಸಿ, ಖುಷಿಪಡಿಸಿದ್ದಾರೆ..ಇಂಥ ಹೃದಯವೈಶಾಲ್ಯ ತೋರಿದವರು ಪುತ್ತೂರಿನ ಎಸ್.ಆರ್.ಕೆ.ಲ್ಯಾಡರ್ ಸಂಸ್ಥೆಯ ಮಾಲಕ ಕೇಶವ ಅಮೈ ಅವರು. ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪಯಣಿಸಿ ಗಗನದಲ್ಲಿ ಹಾರಾಡಿದ ಅನುಭವ ಪಡೆಯಬೇಕೆಂಬುದು ಬಹುತೇಕರ ಆಶಯವಾಗಿದ್ದರೂ, ಬಡ ಮತ್ತು ಮಧ್ಯಮ ವರ್ಗದವರಿಗೆ ಇದುಕಷ್ಟವೇ ಸಾಧ್ಯ. ಈ ಕಾರಣಕ್ಕೆ ಕಾರ್ಮಿಕ ದಿನಾಚರಣೆಯ ಹೆಸರಿನಲ್ಲಿ ತಮ್ಮ ಸಂಸ್ಥೆಯ ಕಾರ್ಮಿಕರೆಲ್ಲರನ್ನು ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.

ದೃಷ್ಟಿ ಹೀನತೆಯ ಸಮಸ್ಯೆಗೆ ತುತ್ತಾಗಿರುವ ಕೇಶವ ಅಮೈ ಅವರು, ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ ನಾ ಕಂಡು ಕಾಣದ ಜಗತ್ತನ್ನು ಕಾರ್ಮಿಕರಿಗೆ ಬಾನಂಗಳದಿಂದ ತೋರಿಸುವ ಪ್ರಯತ್ನ ಮಾಡಬೇಕೆಂಬ ಮಹದಾಸೆಯಿಟ್ಟುಕೊಂಡಿದ್ದರು. ಪ್ರತಿ ವರ್ಷ ಹಲವು ಹೊಸತನವನ್ನು ಪರಿಚಯಿಸುತ್ತಿರುವ ಕೇಶವ ಅಮೈ ಮಾಲಕತ್ವದ ಎಸ್ ...