ಭಾರತ, ಏಪ್ರಿಲ್ 14 -- ಬೆಂಗಳೂರು: ಖ್ಯಾತ ಹಾಸ್ಯನಟ ಬ್ಯಾಂಕ್ ಜನಾರ್ಧನ್‌ ಇಂದು (ಏಪ್ರಿಲ್ 14) ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವಿಧಿವಶರಾಗಿದ್ದಾರೆ. 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು ಜನಾರ್ಧನ್‌. ಇವರಿಗೆ 79 ವರ್ಷ ವಯಸ್ಸಾಗಿತ್ತು.

ಉಪ್ರೇಂದ್ರ, ಜಗ್ಗೇಶ್ ಮುಂತಾದ ನಟ ಜೊತೆ ತೆರೆ ಹಂಚಿಕೊಂಡು ಕನ್ನಡ ಸಿನಿಮಾ ರಂಗವನ್ನ ತನ್ನ ಹಾಸ್ಯದಿಂದ ಆಳಿದ್ದ ಹಿರಿಯ ನಟ ಇಂದು ನಮ್ಮನ್ನು ಅಗಲಿದ್ದಾರೆ.

1948ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಇವರು ತಮ್ಮ ವಿಭಿನ್ನ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಬ್ಯಾಂಕ್ ಜನಾರ್ಧನ್‌. ಸಿನಿಮಾ ಮಾತ್ರದಲ್ಲಿ ರಂಗಭೂಮಿ ಹಾಗೂ ಕಿರುತೆರೆಯಲ್ಲೂ ನಟಿಸಿ ಹೆಸರು ಮಾಡಿದ್ದಾರೆ. ತಮ್ಮ ಡೈಲಾಗ್‌ಗಳು ಹಾಗೂ ನಟನೆಯ ವಿಭಿನ್ನತೆಯು ಇವರು ರಾಜ್ಯದಾದ್ಯಂತ ಅಭಿಮಾನಿಗಳನ್ನು ಗಳಿಸುವಂತೆ ಮಾಡಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ...