Bangalore, ಜುಲೈ 18 -- ಬೆಂಗಳೂರು: ಬೆಂಗಳೂರಿನ ಬಹುಕೋಟಿ ಮೌಲ್ಯದ ಎಚ್ಎಂಟಿ ಅರಣ್ಯ ಭೂಮಿಯ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ಐಎ ಹಾಕಿರುವ ಜತೆಗೆ ಗಣಿ ವಿಚಾರದಲ್ಲಿ ಸಿಬಿಐಗೆ ಪತ್ರ ಬರೆದಿದಿದ್ದ ಹಿರಿಯ ಐಎಫ್‌ಎಸ್‌ ಅಧಿಕಾರಿ ಆರ್‌.ಗೋಕುಲ್‌ ಅವರ ಅಮಾನತು ಆದೇಶಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಕಳೆದ ತಿಂಗಳೇ ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಮೇರೆಗೆ ಕರ್ನಾಟಕ ಸರ್ಕಾರವು ಗೋಕುಲ್‌ ಅವರನ್ನು ಅಮಾನತುಗೊಳಿಸಿದ್ದರೆ, ಇನ್ನೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ ಸ್ಮಿತಾ ಬಿಜೂರ್‌, ನಿವೃತ್ತ ಐಎಎಸ್‌ ಅಧಿಕಾರಿ ಸಂದೀವ್‌ ದವೆ, ನಿವೃತ್ತ ಪಿಸಿಸಿಎಫ್‌ ವಿಜಯಕುಮಾರ್‌ಗೋಗಿ ವಿರುದ್ದವೂ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಆರ್‌. ಗೋಕುಲ್‌ ಅವರು ಕೇಂದ್ರ ಆಡಳಿತಾತ್ಮಕ ಸೇವೆಯ ಅಧಿಕಾರಿಯಾಗಿರುವುದರಿಂದ ಅವರ ಅಮಾನತು ಆದೇಶಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಆದರೆ ಕರ್ನಾಟಕ ಸರ್ಕಾರ ಕಳುಹಿಸಿರುವ ಅಮಾನತು ಆದೇಶವನ್ನು ಕೇಂದ್ರ ಸರ್ಕಾರ ಮ...