ಭಾರತ, ಮಾರ್ಚ್ 9 -- ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಬೆಂಬಲಿಸಲು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಬಂದಿರುವ ಲೆಗ್ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ಅವರು ವಿಚ್ಛೇದನ ವದಂತಿಗಳ ನಡುವೆಯೇ ಮಿಸ್ಟರಿ ಗರ್ಲ್​ನೊಂದಿಗೆ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಒಟ್ಟಿಗೆ ಕೂತು ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಫೋಟೋಸ್ ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದು, ಯಾರು ಈ ಚೆಲುವೆ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಆಕೆ ಹೆಸರು ಆರ್​​ಜೆ ಆರ್​ಜೆ ಮಹ್ವಾಶ್.

ಕೆಲವು ದಿನಗಳ ಹಿಂದಷ್ಟೇ ಯಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆದರು. ಅವರಿನ್ನೂ ಅಧಿಕೃತವಾಗಿ ಘೋಷಿಸದಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವಿಚಾರಣೆ ವೇಳೆ ಇಬ್ಬರು ಇನ್ಮುಂದೆ ಗಂಡ ಹೆಂಡತಿ ಅಲ್ಲ ಎಂದು ವಿಚ್ಛೇದನವನ್ನು ನ್ಯಾಯಾಲಯ ಖಚಿತಪಡಿಸಿರುವ ಕುರಿತು ವರದಿಯಾಗಿತ್...