Bangalore, ಏಪ್ರಿಲ್ 29 -- ಹಿಟ್: ದಿ ಥರ್ಡ್ ಕೇಸ್: ಬೇರೆ ಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವ ಸಮಯದಲ್ಲಿ ಪ್ರತಿಬಾರಿಯು ರಾಜ್ಯದಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ಎಂಬ ಕೂಗು, ಬೇಡಿಕೆ ಇರುತ್ತದೆ. ಹೆಚ್ಚಾಗಿ ಆನ್‌ಲೈನ್‌ನಲ್ಲಿ ಇಂತಹ ಬೇಡಿಕೆ, ಚರ್ಚೆಗಳು ನಡೆಯುತ್ತವೆ. ಆದರೆ, ಹೆಚ್ಚಿನ ಸಿನಿಮಾ ವಿತರಕರು ಕರ್ನಾಟಕದಲ್ಲಿ ಕನ್ನಡ ವರ್ಷನ್‌ನಲ್ಲಿ ಕಾಟಾಚಾರಕ್ಕೆ ಎಂಬಂತೆ ಕೆಲವೇ ಕೆಲವು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಿ "ಬೇರೆ ಭಾಷೆಯಲ್ಲೇ ಕನ್ನಡಿಗರು ನೋಡಲಿ ಬಿಡಿ" ಎಂಬ ತಾತ್ಸಾರ ಪ್ರದರ್ಶಿಸುತ್ತಾರೆ. ಡಬ್ಬಿಂಗ್ ಎನ್ನುವುದು ಚಿತ್ರತಂಡಕ್ಕೆ ಹೆಚ್ಚಿನ ಹೊರೆ ಎನ್ನುವುದು ನಿಜ. ಇದೇ ಸಮಯದಲ್ಲಿ ಬೇರೆ ಭಾಷೆ ತಿಳಿಯದ, ಮಾತ್ರ ಭಾಷೆಯಲ್ಲಿಯೇ ಸಿನಿಮಾ ನೋಡಲು ಇಷ್ಟಪಡುವ ದೊಡ್ಡ ಪ್ರೇಕ್ಷಕ ಬಳಗಕ್ಕೆ ಸಿನಿಮಾವೊಂದನ್ನು ರೀಚ್ ಮಾಡಿಸಲು ಇದು ನೆರವಾಗುತ್ತದೆ. ಕನ್ನಡದ ಕಾಂತಾರ, ಕೆಜಿಎಫ್ ಇದೇ ರೀತಿ ಭಾರತೀಯ ಭಾಷೆಗಳು ಮಾತ್ರವಲ್ಲದೆ ಅನ್ಯದೇಶಗಳ ವಿವಿಧ ಭಾಷೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.