ಭಾರತ, ಏಪ್ರಿಲ್ 16 -- ಹಿಟ್ಲರ್‌ ಕಲ್ಯಾಣ ಸೀರಿಯಲ್‌ ನಟಿ ಪದ್ಮಿನಿ ದೇವನಹಳ್ಳಿ ಮತ್ತು ಲಕ್ಷ್ಮಿ ನಿವಾಸ ಧಾರಾವಾಹಿ ನಟ ಅಜಯ್‌ ರಾಜ್‌ ಮನೆಗೆ ಗಂಡು ಮಗುವಿನ ಆಗಮನವಾಗಿದೆ. ನಾಲ್ಕು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಪದ್ಮಿನಿ ದೇವನಹಳ್ಳಿ ಏಪ್ರಿಲ್‌ 15ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯ ಸುದ್ದಿಯನ್ನು ಇಂದು ಅಜಯ್‌ ರಾಜ್‌ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಜಯ್‌ ರಾಜ್‌ ತನ್ನ ಇನ್‌ಸ್ಟಾಗ್ರಾಂನಲ್ಲಿ ಮಡದಿಯ ಜತೆಗಿರುವ ಬೇಬಿ ಬಂಪ್ಸ್‌ ಫೋಟೋವನ್ನು ಹಂಚಿಕೊಂಡು "ಗಂಡು ಮಗು" ಎಂದು ಶುಭ ಸುದ್ದಿ ನೀಡಿದ್ದಾರೆ. ಇವರಿಬ್ಬರಿಗೆ ಸೆಲೆಬ್ರಿಟಿಗಳು, ಕಿರುತೆರೆಯ ಸೀರಿಯಲ್‌ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇತ್ತೀಚೆಗೆ ಇವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೂ ಮುನ್ನ ಬೇಬಿ ಬಂಪ್ಸ್‌ ಫೋಟೋವನ್ನೂ ಹಂಚಿಕೊಂಡಿದ್ದರು.

ನಟಿ ಪದ್ಮಿನಿ ದೇವನಹಳ್ಳಿಯವರ ತಂದೆ ಕಲಾ ಗಂಗೋತ್ರಿ ಮಂಜು ನಾಟಕ ನಿರ್ದೇಶಕರಾಗಿದ್ದರು. ಇವರಿಂದಲೇ ಪದ್ಮಿನಿಗೆ ನಟನೆಯ ...