Mangaluru,Bengaluru, ಮಾರ್ಚ್ 15 -- ಮಂಗಳೂರು: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ 41ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, ಪ್ರಸಕ್ತ ಸಾಲಿನ ಸ್ವಸ್ತಿಕ್ ಸಂಭ್ರಮ ಹಾಗೂ ಸ್ವಸ್ತಿಕ್ ಸಿರಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿನಿಧಿ ಹರೀಶ್ ಮಾಂಬಾಡಿ ಸೇರಿ 7 ಸಾಧಕರಿಗೆ ಈ ಸಲದ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಘೋಷಣೆಯಾಗಿದೆ. ಇತರೆ 5 ಸಾಧಕರಿಗೆ ಸ್ವಸ್ತಿ ಸಿರಿ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಎಂದು ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಾಗೂ ಸಾಧಕರಿಗೆ ಸ್ವಸ್ತಿಕ್ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭಿಸಿ 17 ವರ್ಷಗಳಾದವು. ಈ ಬಾರಿ ಮಾ.16ರಂದು ಪುಂಜಾಲಕಟ್ಟೆಯ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಎಂ.ತುಂಗಪ್ಪ ಬಂಗೇರ ಹೇಳಿದರು.

ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ ಈ ಸಲದ ಸ್ವಸ್ತಿಕ್ ಸಂಭ್ರಮ ಪುರಸ್ಕಾರವನ್ನು ಏಳು ಸಾಧಕರಿಗೆ ನೀಡಿದ್ದು, ಅವರ ವಿವರ...