ಭಾರತ, ಮಾರ್ಚ್ 13 -- ಕ್ಯಾಡ್ಬರಿ ಡೇರಿ ಮಿಲ್ಕ್ ಇಂಡಿಯಾ ಕಂಪನಿ ಹೊಸ ಜಾಹೀರಾತು ಅಭಿಯಾನ ಶುರುಮಾಡಿದ್ದು, ಪ್ರಚಲಿತ ವಿದ್ಯಮಾನಕ್ಕೆ ಹೊಂದುವಂತೆ ಇರುವ ಕಾರಣ ಸಾಮಾಜಿಕವಾಗಿ ಸಂಚಲನ ಮೂಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಜಾಹೀರಾತು ವಿಚಾರ ಚರ್ಚೆಗೆ ಒಳಗಾಗಿದೆ. ಸಾಮಾನ್ಯವಾಗಿ ಜಾಹೀರಾತು ಚರ್ಚೆಗೆ ಒಳಗಾಗುವುದು ಪ್ರಚಲಿತ ವಿಷಯಗಳಿಗೆ ಸ್ಪಂದಿಸಿದಾಗ. ಅಂತಹ ಸ್ಪಂದನೆ ಈ ಜಾಹೀರಾತಿನ ವಿಷಯದಲ್ಲಿದೆ. ಏನದು ಅಂತೀರಾ, ಉತ್ತರ ಭಾರತ- ದಕ್ಷಿಣ ಭಾರತ ಭಾಷಾ ಸಮರ. ಜನರ ಸಮಸ್ಯೆಗೆ ಸರಳ ಪರಿಹಾರವನ್ನೂ ಒದಗಿಸಿರುವ ಜಾಹೀರಾತು ಕ್ಯಾಡ್ಬರಿ ತಿಂದು ಬಾಯಿ ಸಿಹಿ ಮಾಡುವುದನ್ನು ಕೊನೆಯಲ್ಲಿ ತೋರಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ಹಿಂದಿ ಭಾಷೆ ಹೇರುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಹೋರಾಟ ಶುರುಮಾಡಿದೆ. ಈ ರಾಜಕೀಯ ಭಾ‍ಷಾ ಸಮರ ಕಾವು ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ತ್ರಿ ಭಾಷಾ ಸೂತ್ರ (ಹಿಂದಿ, ಇಂಗ್ಲಿಷ್, ತಮಿಳು) ಅನುಷ್ಠಾನಗೊಳಿಸಿ ಎಂದರೆ, ತಮಿಳುನಾಡು ನಮಗೆ ದ್ವ...