ಭಾರತ, ಏಪ್ರಿಲ್ 30 -- ಜನ್ಮ, ಪುನರ್ಜನ್ಮ ಹೀಗೆ ಹಿಂದಿನ ಪೂರ್ವಾಪರಗಳ ಬಗ್ಗೆ ಇಂದಿಗೂ ಜನರಲ್ಲಿ ನಂಬಿಕೆ ಉಳಿದಿದೆ. ಜನ ಅದನ್ನು ನಂಬುತ್ತಾರೆ. ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳ ಕುರಿತ ಜನ್ಮಾಂತರದ ಕಥೆಗಳು ಕೇಳಿಬರುತ್ತಲೇ ಇರುತ್ತವೆ. ಇದೀಗ ಡಾ. ರಾಜ್‌ಕುಮಾರ್‌ ಮತ್ತು ಡಾ. ವಿಷ್ಣುವರ್ಧನ್‌ ಅವರ ಪೂರ್ವ ಜನ್ಮದ ಬಗ್ಗೆ ನಟ, ನಿರೂಪಕ ಮಾಸ್ಟರ್‌ ಆನಂದ್‌ ಮಾತನಾಡಿದ್ದಾರೆ. ರ್ಯಾಪಿಡ್‌ ರಶ್ಮಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನಗಳಲ್ಲಿ ಈ ಬಗ್ಗೆ ತಮಗೆ ಗೊತ್ತಿದ್ದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಣ್ಣಾವ್ರು ಮತ್ತು ಸಾಹಸ ಸಿಂಹನ ಕಳೆದ ಜನ್ಮದ ಬಗೆಗಿನ ಅಚ್ಚರಿಯನ್ನು ಮಾಸ್ಟರ್‌ ಆನಂದ್‌ ಅವರಿಗೆ ವಿನಯ್‌ ಗುರೂಜಿ ಹೇಳಿದ್ದರಂತೆ.

ಅಣ್ಣಾವ್ರು ಎಷ್ಟು ಚೆನ್ನಾಗಿ ಬದುಕಿದ್ರು. ಯಾವುದೋ ಒಂದು ಶಕ್ತಿ ನನಗೆ ಈ ರೀತಿ ಮಾಡಿಸ್ತಿದೆ ಅನ್ನೋರು. ಹೇಗೆ ಈ ಜ್ಞಾನ ಬಂತು ಅಂತ ನಾನು ಒಮ್ಮೆ ವಿನಯ್‌ ಗುರೂಜಿ ಅವರ ಬಳಿ ನಾನಿದ್ದನ್ನು ಕೇಳಿದೆ. ನಮ್ಮ ಮಟ್ಟಿಗೆ ಅವರೊಬ್ಬ ಮನುಷ್ಯನಾಗಿ ಕಾಣಬಹುದು. ಆದರೆ,...