Hassan, ಮಾರ್ಚ್ 17 -- ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಭಾಗದಲ್ಲಿ ಭಾರೀ ಉಪಟಳ ನೀಡುತ್ತಿದ್ದ ಆನೆಯನ್ನು ಸಾಕಾನೆಗಳ ಸಹಕಾರದಿಂದ ಸೆರೆ ಹಿಡಿಯಲಾಯಿತು.

ಬೇಲೂರು ತಾಲ್ಲೂಕಿನ ಹಳ್ಳಿಗದ್ದೆಯ ಶಾಂತಿ ಎಸ್ಟೇಟ್‌ನಲ್ಲಿ ಇದ್ದ ಆನೆಗೆ ಅರವಳಿಕೆ ಮದ್ದು ನೀಡಿದಾಗ ಅದು ಕೆಳಕ್ಕೆ ಉರುಳಿ ಬಿತ್ತು.

ಸಾಕಾನೆಗಳ ಸಹಕಾರದಿಂದ ಸೆರೆ ಸಿಕ್ಕ ಕಾಡಾನೆಗೆ ಹಗ್ಗಗಳನ್ನು ಕಟ್ಟಿ ಅದನ್ನು ಮತ್ತೆ ಕಾಡಿಗೆ ಬಿಡಲು ಅಣಿಗೊಳಿಸಲಾಯಿತು.

ಆನಂತರ ಕಾಲಿಗೆ ಕಟ್ಟಿದ ಹಗ್ಗದ ಸಹಕಾರದಿಂದಲೇ ಸಾಕಾನೆಗಳು ಪುಂಡಾನೆಯನ್ನು ಸಾಗಣೆಗೆ ಅಣಿಯಾಗಿದ್ದ ಲಾರಿ ಬಳಿಗೆ ಕೊಂಡೊಯ್ದವು.

ಬಳಿಕ ಆನೆಯನ್ನು ಸಾಕು ಆನೆಗಳ ಸಹಕಾರಿಂದ ಲಾರಿ ಮೇಲೆ ಹತ್ತಿಸಲಾಯಿತು.

ಲಾರಿಗೆ ಹತ್ತಿದ ಆನೆಯೊಂದಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದ ಆನೆಗಳು ಸಾಥ್‌ ನೀಡಿದವು.

ಭಾರೀ ಗಾತ್ರದ ಲಾರಿ ಹಾಗೂ ಕ್ರೇನ್‌ಗಳನ್ನು ಬಳಸಿ ಸೆರೆ ಸಿಕ್ಕ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲಾಗಿದೆ.

ಬೇಲೂರು ತಾಲ್ಲೂಕಿನ ಬಿಕ್ಕೋಡಿನ ಬಳಿಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆದಾಗ ಭಾರೀ ಜನಸಂಖ್ಯ...