ಭಾರತ, ಫೆಬ್ರವರಿ 10 -- ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದ ಕುಟುಂಬ ಸದಸ್ಯರಿಗೆ ಆಂಬುಲೆನ್ಸ್‌ನಲ್ಲಿ ಆತ ಊಟಕ್ಕೆ ಎದ್ದು ಕುಳಿತಾಗ ಆಘಾತವಾಗಿತ್ತು. ಊರಿನಲ್ಲಿ ಮೃತಪಟ್ಟಿದ್ದಾನೆಂದು ಹೇಳಲಾದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ಊರು ತುಂಬಾ ಶ್ರದ್ಧಾಂಜಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಮೃತಪಟ್ಟ ವ್ಯಕ್ತಿ ಬದುಕಿ ಬಂದ ಎಂಬ ಸುದ್ದಿ ವೈರಲ್ ಆಯಿತು. ಆದರೆ, ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ ಅವರು ಈ ಕಹಾನಿಯ ನಿಜಸ್ಥಿತಿ ಏನು ಎಂಬುದನ್ನು ವಿವರಿಸಿದ್ದಾರೆ.

ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ಕುಟುಂಬಸ್ಥರು ಮೃತನ ಅಂತ್ಯಕ್ರಿಯೆಗೆ ಊರಲ್ಲಿ ಸಿದ್ಧತೆ ನಡೆಸಿದ್ದರು. ಆಂಬುಲೆನ್ಸ್ ಮೂಲಕ ಮೃತ ವ್ಯಕ್ತಿಯನ್ನು ಕೊಂಡೊಯ್ಯುವಾಗ ದಾರಿ ಮಧ್ಯೆ, ಆತನ ಪತ್ನಿ ಶೀಲಾ "ಡಾಬಾ ಬಂತು ನೋಡು ಊಟ ಮಾಡುತ್ತೀಯಾ?" ಎಂದು ಕೇಳಿದ ಕೂಡಲೆ, ಮೃತ ವ್ಯಕ್ತಿ ಎದ್ದು ಕು...