ಭಾರತ, ಫೆಬ್ರವರಿ 9 -- ಹಾಲು ಮತ್ತು ಪನೀರ್ ಅನ್ನು ಮಾಂಸಾಹಾರಿ ಆಹಾರ ಎಂದು ಭಾರತೀಯ ವೈದ್ಯರೊಬ್ಬರು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಡಾ. ಸಿಲ್ವಿಯಾ ಕಾರ್ಪಗಮ್ ಅವರು ಹಾಲು ಮತ್ತು ಪನೀರ್ ಅನ್ನು ಪ್ರಾಣಿ ಮೂಲಗಳಿಂದ ಪಡೆಯಲಾಗಿದೆ. ಹೀಗಾಗಿ ಅವುಗಳನ್ನು ಸಸ್ಯಾಹಾರಿ ಆಹಾರಗಳೆಂದು ವರ್ಗೀಕರಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಸ್ಯಾಹಾರಿಗಳನ್ನು ಕೆರಳಿಸಿದ್ದಾರೆ.

ವೈದ್ಯರೊಬ್ಬರ ಪತ್ನಿ ಸುನೀತಾ ಸಾಯಮ್ಮ ಎಂಬಾಕೆಯು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಊಟದ ತಟ್ಟೆಯ ಫೋಟೋ ಹಂಚಿಕೊಳ್ಳುತ್ತಾ, ಇದರಲ್ಲಿ ಪ್ರೋಟೀನ್, ಉತ್ತಮ ಕೊಬ್ಬು ಮತ್ತು ನಾರಿನಂಶವಿದೆ ಎಂದು ಬರೆದಿದ್ದರು. ಊಟದ ತಟ್ಟೆಯಲ್ಲಿ ಪನೀರ್, ಹೆಸರು ಬೇಳೆ, ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿ ಸಲಾಡ್, ಹಸಿ ತೆಂಗಿನಕಾಯಿ, ವಾಲ್ನಟ್ಸ್ ಮತ್ತು ಖೀರ್ ಅನ್ನು ಒಳಗೊಂಡಿತ್ತು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್‌ನ ಕಾರ್ಯನಿರತ ಸಂಪಾದಕಿ ಡಾ. ಸಿಲ್ವಿಯಾ ಕಾರ್ಪಗಮ್, ಹಾಲು ಮತ್ತು ಪನೀರ್ ಸ...