Bengaluru, ಮಾರ್ಚ್ 22 -- Toxic Movie Release Date: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್‌ ಚಾಪ್ಟರ್‌ 1 ಮತ್ತು 2ರ ಯಶಸ್ಸಿನ ಬಳಿಕ ಯಶ್‌ ಪುನರಾಗಮನವಾಗುತ್ತಿದೆ. ಈ ಕಾರಣಕ್ಕೂ ಟಾಕ್ಸಿಕ್‌ ಹವಾ ಜೋರಾಗಿದೆ. ಚಿತ್ರದ ಸಣ್ಣ ಸಣ್ಣ ಝಲಕ್‌ ಹೊರಬಿದ್ದಾಗಲೇ ಸಂಭ್ರಮಿಸಿದ್ದ ಫ್ಯಾನ್ಸ್‌, ಇದೀಗ ಅಚ್ಚರಿಯ ರೀತಿಯಲ್ಲಿ ಟಾಕ್ಸಿಕ್‌ ಚಿತ್ರದ ಬಿಡುಗಡೆ ದಿನಾಂಕವನ್ನೇ ಘೋಷಣೆ ಮಾಡಿದೆ ಚಿತ್ರ ನಿರ್ಮಾಣ ತಂಡ. ಈ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಇದೀಗ #TaxicTheMovie ಟ್ರೆಂಡ್‌ ಆಗುತ್ತಿದೆ.

ಟಾಕ್ಸಿಕ್‌ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದೀಗ ಸರ್ಪ್ರೈಸ್‌ ರೀತಿಯಲ್ಲಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, 2026ರ ಮಾರ್ಚ್‌ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಯುಗಾದಿ ಮತ್ತು ಈದ್‌ ಹಬ್ಬದ ಜತೆಗೆ ಸತತ ನಾಲ್ಕು ರಜೆಗಳಿರುವ ದಿನವನ್ನ...