ಭಾರತ, ಏಪ್ರಿಲ್ 7 -- ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ.... ಕೊನೆಗೂ ಗೆದ್ದಿದ್ದು ಆರ್‌ಸಿಬಿ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ತವರು ನೆಲದ ತಂಡ ಮುಂಬೈ ಇಂಡಿಯನ್ಸ್‌ ಆಡುತ್ತಿದ್ದರೂ ಆರ್‌ಸಿಬಿ ಅಭಿಮಾನಿಗಳ ಜಯಘೋಷವೇ ಎಲ್ಲೆಡೆ ಕೇಳುತ್ತಿತ್ತು. ಅದಕ್ಕೆ ತಕ್ಕನಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ಅತಿ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ವರೆಗೂ ಗೆಲ್ಲುವ ಹಂತದಲ್ಲಿದ್ದ ಎಂಐ, ಸತತ ಎರಡನೇ ಪಂದ್ಯದಲ್ಲಿ ಚೇಸಿಂಗ್‌ ಪೂರ್ಣಗೊಳಿಸಲಾಗದೆ ಮುಗ್ಗರಿಸಿದೆ. ಆರ್‌ಸಿಬಿ ತಂಡ ಗೆಲುವಿನ ನಗುವಿನೊಂದಿಗೆ ವಾಂಖೆಡೆಯಲ್ಲಿ 10 ವರ್ಷಗಳ ಬಳಿಕ ಜಯದ ನಗೆ ಬೀರಿದೆ. ಸತತ 6 ಪಂದ್ಯಗಳಲ್ಲಿ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಸೋತಿದ್ದ ಆರ್‌ಸಿಬಿ, ಈ ಬಾರಿ ಗೆದ್ದು ಬೀಗಿದೆ.

ಇತ್ತೀಚೆಗಷ್ಟೇ ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧ 17 ವರ್ಷಗಳ ಬಳಿಕ ಗೆದ್ದಿದ್ದ ಆರ್‌ಸಿಬಿ, ಇದೀಗ ಮುಂಬೈನಲ್ಲಿ 10 ವರ್ಷಗಳ ಗೆಲುವಿನ ಬರ ನೀಗಿಸಿದೆ. ಪಂದ್ಯದುದ್ದಕ್ಕೂ ವಾಂಖೆಡೆಯಲ್ಲಿ ಆರ್‌ಸಿಬಿ ಅಭಿಮಾನಿಗ...