ಭಾರತ, ಫೆಬ್ರವರಿ 23 -- Palmistry: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ರೇಖೆಗಳು ವ್ಯಕ್ತಿಯ ಸಂಬಂಧ, ವೃತ್ತಿ ಜೀವನ, ಆರೋಗ್ಯ ಹಾಗೂ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ತಿಳಿಸುತ್ತವೆ. ಅಂಗೈಯಲ್ಲಿರುವ ಆರೋಗ್ಯ ರೇಖೆಯು ವ್ಯಕ್ತಿಯ ಆರೋಗ್ಯ ಸ್ಥಿತಿಯ ಬಗ್ಗೆ ಅನೇಕ ವಿಶೇಷ ಸೂಚನೆಗಳನ್ನು ನೀಡುತ್ತದೆ. ವ್ಯಕ್ತಿಯ ಅಂಗೈಯಲ್ಲಿರುವ ಆರೋಗ್ಯ ರೇಖೆಯು ಕಿ ರುಬೆರಳಿನ ಕೆಳಭಾಗದಿಂದ ಪ್ರಾರಂಭವಾಗಿ ಹೆಬ್ಬೆರಳಿನವರೆಗೆ ವಿಸ್ತರಿಸಬಹುದು. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಆರೋಗ್ಯ ರೇಖೆಯು ಅಂಗೈಯಲ್ಲಿ ಎಲ್ಲಿಯಾದರೂ ಪ್ರಾರಂಭವಾಗಬಹುದು, ಆದರೆ ಅದು ಅಂಗೈಯಲ್ಲಿರುವ ಬುಧ ಪರ್ವತದ ಮೇಲೆ ಕೊನೆಗೊಳ್ಳುತ್ತದೆ. ಆರೋಗ್ಯ ರೇಖೆಯು ಶುಕ್ರ ಪರ್ವತ, ಜೀವನ ರೇಖೆ, ಚಂದ್ರ ಪರ್ವತ, ವಿಧಿ ರೇಖೆ ಅಥವಾ ಮಂಗಳ ಪರ್ವತದಿಂದ ಪ್ರಾರಂಭವಾಗಿ ಬುಧ ಪರ್ವತವನ್ನು ತಲುಪಿದರೆ, ಅದನ್ನು ಆರೋಗ್ಯ ರೇಖೆ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಅಂಗೈಯಲ್ಲಿರುವ ಆರೋಗ್ಯ ರೇಖೆ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋ...