Bengaluru, ಏಪ್ರಿಲ್ 7 -- ಹಿಂದೂ ಧರ್ಮದಲ್ಲಿ ಹಸುವನ್ನು ತುಂಬಾ ಪೂಜ್ಯನೀಯ ಎಂದು ನಂಬಲಾಗಿದೆ. ಜೋತಿಷ್ಯ ಮತ್ತು ಧಾರ್ಮಿಕತೆಯ ದೃಷ್ಟಿಯಲ್ಲಿ ಹಸುವನ್ನು ಕಾಮಧೇನು, ಗೋಮಾತೆ ಎನ್ನುತ್ತೇವೆ. ಕೆಲವೊಂದು ಜನ್ಮನಕ್ಷತ್ರಕ್ಕೆ ಸಂಬಂಧಿಸಿದಂತೆ ಗೋಪ್ರಸವ ಶಾಂತಿಯನ್ನು ಆಚರಿಸುತ್ತೇವೆ. ಇದರಿಂದ ಜೀವನದಲ್ಲಿ ಜನ್ಮ ಕುಂಡಲಿಯಲ್ಲಿನ ದೋಷಗಳು ದೂರವಾಗುತ್ತವೆ. ಗೋವಿನ ಪ್ರಸವದ ವೇಳೆ ಗೋವಿಗೆ ತೊಂದರೆ ಆಗದಂತೆ ಕೆಲವೆಡೆ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಜೀವನದಲ್ಲಿನ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿವೆ ಎಂದು ಪುರಾಣಗಳಿಂದ ತಿಳಿದುಬರುತ್ತದೆ. ಋಗ್ವೇದದಲ್ಲಿ ಗೋಮಾತೆಯ ಬಗ್ಗೆ ಕೆಲವೊಂದು ಮಂತ್ರಗಳಿವೆ. ಪೂಜೆಗಳಲ್ಲಿ ಗೋಪದ್ಮವ್ರತಕ್ಕೆ ವಿಶೇಷವಾದ ಮನ್ನಣೆ ಇದೆ. ಪಂಚಗವ್ಯ ಸೇವನೆಯಿಂದ ದೇಹ ಮತ್ತು ಆತ್ಮಶುದ್ಧಿ ಆಗುವ ನಂಬಿಕೆ ಇದೆ. ಹಸಿವಿನಿಂದ ಇರುವ ಗೋವಿಗೆ ಆಹಾರ ನೀಡಿದಲ್ಲಿ ಸ್ವರ್ಗಪ್ರಾಪ್ತಿ ಆಗುವುದೆಂಬ ನಂಬಿಕೆ ಇದೆ. ಅಗ್ನಿಪುರಾಣದಲ್ಲಿ ಗೋಮಾತೆಯ ಬಗ್ಗೆ ಅನೇಕ ವಿಚಾರಗಳು ...