ಭಾರತ, ಏಪ್ರಿಲ್ 15 -- ಕರ್ನಾಟಕದಲ್ಲಿ ಕೆಲವು ದಿನಗಳಿಂದ ಪ್ರತಿದಿನ ಮಳೆ ಬರುತ್ತಿದ್ದು, ಈ ಮಳೆ ಇನ್ನೂ ಕೆಲ ದಿನಗಳು ಮುಂದುವರಿಯಲಿದೆ. ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ಇಂದು ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಬೀದರ್, ಕಲಬುರಗಿ, ಯಾದಗಿರಿ ಈ ಪ್ರದೇಶಗಳಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಇಂದಿನ ತಾಪಮಾನ 24 degC . ದಿನದ ಗರಿಷ್ಠ ತಾಪಮಾನ 32degC, ಕನಿಷ್ಠ ತಾಪಮಾನ 19 degC ಇರಲಿದೆ. ಬೇಸಿಗೆಯಾದರೂ ಮಳೆ ಬರುತ್ತಿದೆ ಎಂದು ಹೇಳುವಂತ ಪ್ರಸಂಗ ಮತ್ತೆ ಮುಂದುವರೆಯಲಿದೆ.

ಕರಾವಳಿಯಲ್ಲಿ ಮಳೆದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಬೀಳಲಿದೆ.

ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆ ಬರುವ ಮುನ್ಸೂಚನೆ ಇದೆ. ಆದರೆ ಉಳಿದ ಕೆಲ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ ಈ ಎಲ್ಲಾ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಬೀದರ್, ...