Bengaluru, ಮೇ 24 -- ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹವಾಮಾನ ತಂಪಾಗಿದೆ. ಹೀಗಾಗಿ ಮಸಾಲೆಯುಕ್ತ ಆಹಾರದತ್ತ ಬಹುತೇಕರು ಮೊರೆ ಹೋಗುತ್ತಿದ್ದಾರೆ. ಬೆಳಗ್ಗಿನ ತಿಂಡಿಗೆ ಮಸಾಲೆ ಪುಳಿಯೋಗರೆ ಮಾಡಬಹುದು. ರಾತ್ರಿ ಅನ್ನ ಉಳಿದಿದ್ದರೆ ಅದನ್ನು ವ್ಯರ್ಥ ಮಾಡದೆ ಬೆಳಗ್ಗಿನ ತಿಂಡಿಗೆ ಮಸಾಲೆ ಪುಳಿಯೋಗರೆ ತಯಾರಿಸಬಹುದು. ಕೇವಲ ಐದು ರಿಂದ ಹತ್ತು ನಿಮಿಷಗಳಲ್ಲಿ ತಯಾರಾಗುವ ಈ ಉಪಾಹಾರ ತಿಂಡಿ ಅದ್ಭುತ ರುಚಿಯನ್ನು ಹೊಂದಿದೆ. ಬೆಳಗ್ಗಿನ ತಿಂಡಿ ಮಾತ್ರ ಅಲ್ಲ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೂ ತಯಾರಿಸಬಹುದು. ಈ ಮಸಾಲೆ ಪುಳಿಯೋಗರೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಬೇಯಿಸಿದ ಅನ್ನ - ಎರಡು ಕಪ್, ಹಸಿಮೆಣಸಿನಕಾಯಿ ಪೇಸ್ಟ್ - ಒಂದು ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಸಾಸಿವೆ - ಅರ್ಧ ಚಮಚ, ಅರಿಶಿನ - ಅರ್ಧ ಚಮಚ, ಮೆಣಸಿನ ಪುಡಿ - ಅರ್ಧ ಚಮಚ, ಹಸಿ ಮೆಣಸಿನಕಾಯಿ - ಅರ್ಧ ಚಮಚ, ಕೊತ್ತಂಬರಿ ಸೊಪ್ಪು - ಒಂದು ಚಮಚ, ಕರಿಬೇವು - ಒಂದು ಹಿಡಿ, ಎಣ್ಣೆ - ಒಂದು ಚಮಚ, ಜೀರಿಗೆ - ಒಂದು ...