ಭಾರತ, ಫೆಬ್ರವರಿ 26 -- ಮಾಲೆಗಾಂವ್‌ನ ಹುಡುಗರ ಗುಂಪಿನ ನಿಜ ಜೀವನದ ಕಥೆಯನ್ನು ಆಧರಿಸಿ ಮಾಡಿದ ಸಿನಿಮಾವೇ 'ಸೂಪರ್‌ಬಾಯ್ಸ್ ಆಫ್ ಮಾಲೆಗಾಂವ್' ಭಾರತೀಯ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಕೇವಲ ಮನರಂಜನೆಗೆ ಮಾತ್ರ ಸ್ಪೂರ್ತಿದಾಯಕ ಕಥೆಗಳನ್ನೂ ಸಹ ನೀಡುತ್ತಿದೆ. ಸೋತವರಿಗೂ ಮತ್ತೆ ಗೆಲುವಿನ ಧೈರ್ಯ ತುಂಬುವ ಆಶಾದಾಯಕ ಸಿನಿಮಾಗಳು ತೆರೆಗೆ ಬರುತ್ತಿದೆ. ಅದೇ ರೀತಿ 'ಸೂಪರ್‌ಬಾಯ್ಸ್ ಆಫ್ ಮಾಲೆಗಾಂವ್' ಕೂಡ ಒಂದು ಸ್ಪೂರ್ತಿದಾಯಕ ಕಥೆ ಹೊಂದಿರುವು ಸಿನಿಮಾ. ಈ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ.

ರೀಮಾ ಕಾಗ್ತಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಕಥೆ ಭಾವನಾತ್ಮಕವಾಗಿದೆ. ಹಳ್ಳಿಯಲ್ಲಿನ ಜನರು ದೊಡ್ಡ ಕನಸು ಕಾಣುವುದು ತಪ್ಪಲ್ಲ ಆದರೆ ಅದನ್ನು ನನಸಾಗಿಸುವುದರಲ್ಲಿ ಸೋಲುತ್ತಿರುವುದು ತಪ್ಪು. ಹಠ ಹಿಡಿದರೆ ಏನು ಬೇಕಾದರೂ ಮಾಡಬಹುದು ಎಂದು ಈ ಸಿನಿಮಾ ನೋಡಿದ ನಂತರ ಅರ್ಥವಾಗುವ ರೀತಿ ಇದೆ. ಮಾಲೆಗಾಂವ್ ಗ್ರಾಮದಲ್ಲಿನ ಕೆಲ ಯುವಕರು ಸಿನಿಮಾ ಮಾಡಬೇಕು ಎಂದು ಅಂದುಕೊಂಡು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆ...