Bengaluru, ಏಪ್ರಿಲ್ 5 -- 12ನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಆ ರೇಟಿಂಗ್‌ನಲ್ಲಿ ಜೀ ಕನ್ನಡದ ಯಾವ ಸೀರಿಯಲ್‌ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡು ಟಾಪ್‌ ಸ್ಥಾನದಲ್ಲಿದೆ? ಕಡಿಮೆ ಟಿಆರ್‌ಪಿ ಪಡೆದ ಧಾರಾವಾಹಿ ಯಾವುದು? ಇಲ್ಲಿದೆ ವಿವರ.

12ನೇ ವಾರದ ಟಿಆರ್‌ಪಿ ಲೆಕ್ಕಾಚಾರದ ಪ್ರಕಾರ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಇದೀಗ 8.0 ಟಿವಿಆರ್‌ ಪಡೆದು ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ಮೂಲಕ ಮತ್ತೆ ಹಳೇ ಲಯಕ್ಕೆ ಮರಳಿದೆ.

11ನೇ ವಾರದಲ್ಲಿ ಅಗ್ರಸ್ಥಾನಕ್ಕೆ ಬಂದ ಅಣ್ಣಯ್ಯ ಧಾರಾವಾಹಿ, ಇದೀಗ 12ನೇ ವಾರದಷ್ಟೊತ್ತಿಗೆ ಮತ್ತೆ ಕುಸಿತ ಕಂಡಿದೆ. ಈ ಧಾರಾವಾಹಿ 7.6 ರೇಟಿಂಗ್‌ ಪಡೆದು ಮೂರನೇ ಸ್ಥಾನಕ್ಕೆ ಬಂದು ನಿಂತಿದೆ.

ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್‌ ಜಾಗ ಪಡೆದಿದೆ. ಈ ಧಾರಾವಾಹಿ 7.7 ಟಿಆವಿಆರ್‌ ಪಡೆದುಕೊಂಡಿದೆ. ಶ್ರೀಲಂಕಾದಲ್ಲಿನ ಸಂಚಿಕೆಗಳು ಸದ್ಯ ಪ್ರಸಾರವಾಗುತ್ತಿದ್ದು, ವೀಕ್ಷಕ ವಲಯದಲ್ಲಿ ಕುತೂಹಲ ಮೂಡಿಸಿವೆ.

ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ ಮೂರು ವಾರಗಳ ಕಾಲ ಮೊದಲ ಸ್ಥಾನದಲ್ಲಿ...