Bengaluru, ಏಪ್ರಿಲ್ 4 -- ಕೆಲವು ವರ್ಷಗಳ ಹಿಂದೆ ಸೀರೆಗೆ ಹೊಲಿಸಿರುವ ರವಿಕೆಯು ಫ್ಯಾಷನ್‍ನಿಂದ ಹೊರಗುಳಿದಿದ್ದರೆ, ಈ ಫ್ಯಾಷನ್ ಸಲಹೆಗಳು ನಿಮಗೆ ತುಂಬಾ ಉಪಯುಕ್ತವಾಗುತ್ತವೆ. ಹಳೆಯ ಬ್ಲೌಸ್‌ಗೆ ಹೊಸ ನೋಟವನ್ನು ನೀಡುವ ಮೂಲಕ ಅದನ್ನು ಮರುಬಳಕೆ ಮಾಡಬಹುದು. ಹಳೇ ರವಿಕೆಗಳಿಗೆ ಹೊಸ ಲುಕ್ ನೀಡುವ ಮೂಲಕ ಅದನ್ನು ಆಕರ್ಷಣೀಯವನ್ನಾಗಿ ಮಾಡಬಹುದು.

ಹಳೆಯ ಬ್ಲೌಸ್ ಅನ್ನು ಕತ್ತರಿಸುವ ಮೂಲಕ ಕ್ರಾಪ್ ಟಾಪ್ ಮಾಡಿ. ಅದನ್ನು ಜೀನ್ಸ್ ಅಥವಾ ಸ್ಕರ್ಟ್ ಜೊತೆ ಜೋಡಿಸಿ. ನೀವು ಬ್ಲೌಸ್‌ನ ಅಂಚುಗಳನ್ನು ಹೊಲಿಯಬಹುದು ಅಥವಾ ಫ್ರಿಂಜ್ ಶೈಲಿ ಮಾಡಬಹುದು.

ಬ್ಲೌಸ್‌ನ ತೋಳುಗಳನ್ನು ಬದಲಾಯಿಸುವ ಮೂಲಕ ಅಥವಾ ಅದರ ಮೇಲೆ ಕಸೂತಿ ಮಾಡಿ ಹಳೆಯ ಲೆಹೆಂಗಾದೊಂದಿಗೆ ಜೋಡಿಸುವ ಮೂಲಕ ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ಬ್ಲೌಸ್ ಅನ್ನು ಮುಂಭಾಗದಿಂದ ಕತ್ತರಿಸಿ ಜಾಕೆಟ್‌ನಂತೆ ವಿನ್ಯಾಸಗೊಳಿಸಿ. ಸೀರೆ ಅಥವಾ ಕುರ್ತಾ ಮೇಲೆ ಜಾಕೆಟ್‍ನಂತೆ ಧರಿಸಿದರೆ ಸೊಗಸಾಗಿ ಕಾಣುತ್ತದೆ.

ಹಳೆಯ ಬ್ಲೌಸ್‌ಗೆ ವರ್ಣರಂಜಿತ ಬಟ್ಟೆಯ ಪ್ಯಾಚ್‌ಗಳು, ಮಣಿಗಳು ಅಥವಾ ಮಿನು...