ಭಾರತ, ಮೇ 26 -- ತಮಗಾಗಿ ಒಂದು ಸ್ವಂತದ ಗೂಡು ಮಾಡಿಕೊಳ್ಳಬೇಕು, ತಮ್ಮ ಪ್ರೀತಿಪಾತ್ರರ ತಲೆಗಳ ಮೇಲೆ ಒಂದು ಸೂರಿನ ರಕ್ಷಣೆ ಇರಬೇಕು ಎಂದು ಜನ ಕನಸು ಕಾಣುತ್ತಾರೆ. ಮಧ್ಯಮವರ್ಗದ ಕುಟುಂಬಗಳಿಗಂತೂ ಇದೊಂದು ಜೀವಮಾನದ ಕನಸಾಗಿರುತ್ತದೆ. ಇದಕ್ಕಾಗಿ ಅವರು ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ದುಡಿಯುತ್ತಾರೆ. ವರ್ಷಗಟ್ಟಲೆ ಹೊಟ್ಟೆ-ಬಟ್ಟೆ ಕಟ್ಟಿ, ಕಾಸಿಗೆ ಕಾಸು ಕೂಡಿಸಿ, ತಮ್ಮ ನಿವೃತ್ತಿಯ ವೇಳೆಗಾದರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಲೇಬೇಕೆಂದು ಸತತವಾದ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಮನೋಹರ್‌ರವರು ಕೂಡಾ ಇದೇ ಕನಸನ್ನು ಹೊಂದಿದ್ದರು. ಅವರು ವೃತ್ತಿಯಲ್ಲಿ ಪ್ರೌಢಶಾಲೆಯೊಂದರ ಶಿಕ್ಷಕರು. ಹೆಂಡತಿ ಮತ್ತು ಇಬ್ಬರು ಮಕ್ಕಳಿರುವ ಪುಟ್ಟ ಕುಟುಂಬ ಅವರದು. ದೊಡ್ಡ ಮಗ ಈ ವರ್ಷವಷ್ಟೇ ಅವರದೇ ಶಾಲೆಗೆ ಸೇರಿದ್ದಾನೆ. ಮಗಳು ಚಿಕ್ಕವಳು, ಈಗ 5ನೇ ತರಗತಿಯಲ್ಲಿದ್ದಾಳೆ. ಸ್ವಂತದ ಮನೆಯೊಂದನ್ನು ಹೊಂದುವ ಬಯಕೆ ಅವರದ್ದಾಗಿದೆ. ಅವರ ಬಳಿ ನಿವೇಶನ ಇರದ ಕಾರಣ ಹಾಗೂ ಮನೆಯೊಂದನ್ನು ಹೊಸದಾಗಿ ಕಟ್ಟಿಸುವಷ್ಟು ಹಣವನ್ನು ಹೊಂದಿಸುವುದೂ ಅವರಿಗೆ ...