Bangalore, ಮೇ 6 -- ಕೆಲವರಿಗೆ ಹಲ್ಲುಗಳ ನಡುವೆ ಅಂತರ ಇರುತ್ತದೆ. ಆದರೆ ಕೆಲವರು ಹಲ್ಲುಗಳನ್ನು ಕೂಡಿಸಲು ಟೂತ್ ಕ್ಲಿಪ್ ಹಾಕುತ್ತಾರೆ. ಹಲ್ಲುಗಳ ನಡುವಿನ ಅಂತರ ಕೆಲವರಿಗೆ ಇಷ್ಟವಾಗದೇ ಇರಬಹುದು. ವ್ಯಕ್ತಿಗಳ ಮುಂದೆ ಇರಿಸುಮುರಿಸಿಗೂ ಒಳಗಾಗುತ್ತಾರೆ. ಮುಜುಗರದ ಭಾವನೆಗೂ ಒಳಗಾಗುತ್ತಾರೆ. ಆದರೆ ಅಂತಹ ವ್ಯಕ್ತಿಗಳು ಈ ವಿಷಯ ತಿಳಿದರೆ, ನಿಜವಾಗಿಯೂ ನಿಮಗೆ ನಿಮ್ಮ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಹೌದು, ಈ ವಿಚಾರ ತಿಳಿದರೆ ಖಂಡಿತವಾಗಿಯೂ ಹಲ್ಲುಗಳ ನಡುವಿನ ಅಂತರ ಇರುವುದನ್ನು ಇಷ್ಟಪಡುತ್ತಾರೆ. ಹಲ್ಲುಗಳ ಮಧ್ಯೆ ಅಂತರ ಇರುವುದಕ್ಕೆ ಅನೇಕ ಕಾರಣಗಳಿವೆ. ಕೆಲವರಿಗಿದು ವಂಶಪಾರಂಪರಿಕವಾಗಿಯೂ ಬರುತ್ತದೆ. ಪೋಷಕರಿಂದ ಮಕ್ಕಳಿಗೆ ಹರಡುತ್ತದೆ. ಮತ್ತು ಸಣ್ಣ ಹಲ್ಲುಗಳು, ಹಲ್ಲುಗಳ ವಿಕಸನ ಮತ್ತು ದವಡೆಗೆ ಹೊಂದಿಕೊಳ್ಳಲು ಅಸಮರ್ಥತೆ ಅಂಶಗಳಿಂದಲೂ ಇದು ಕಾರಣವಾಗಬಹುದು. ಆದರೆ ಇವರು ತುಂಬಾ ಅದೃಷ್ಟವಂತರು!

ಕೆಲವು ಜನರು ತಮ್ಮ ಹಲ್ಲುಗಳ ನಡುವೆ ಅಂತರ ಹೊಂದಲು ಇಷ್ಟಪಡುವುದಿಲ್ಲ. ಅಂ...