Bengaluru, ಏಪ್ರಿಲ್ 17 -- ಈ ವರ್ಷದ 14ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆ ಪೈಕಿ ಜೀ ಕನ್ನಡದ ಧಾರಾವಾಹಿಗಳೇ ಟಿಆರ್‌ಪಿಯಲ್ಲಿ ಮೇಲುಗೈ ಸಾಧಿಸಿವೆ. ಆದರೆ, ಈ ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ ನಂಬರ್ಸ್‌ ವಿಚಾರವಾಗಿ ಕಡಿಮೆ ಆಗಿದೆ. ಟಿವಿಯಲ್ಲಿ ಐಪಿಎಲ್‌ ಹಂಗಾಮಾ ಶುರುವಾಗಿರೋದ್ರಿಂದ ಆ ಕಾರಣಕ್ಕೂ ಧಾರಾವಾಹಿಗಳ ಟಿಆರ್‌ಪಿ ನಂಬರ್ಸ್‌ ಕುಸಿತ ಕಂಡಿದೆ. ಹಾಗಾದರೆ, 14ನೇ ವಾರ ಜೀ ಕನ್ನಡದ ಸೀರಿಯಲ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಮೊದಲ ಸ್ಥಾನ ಯಾರಿಗೆ? ಹೀಗಿದೆ ವಿವರ.

ಜೀ ಕನ್ನಡ ವಾಹಿನಿಯಲ್ಲಿ ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌, ಮತ್ತೆ ಹಳೇ ಲಯಕ್ಕೆ ಮರಳಿದೆ. ಅಂದರೆ, ನಂಬರ್‌ 1 ಸ್ಥಾನಕ್ಕೆ ಏರಿದೆ. ಈ ಮೊದಲು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದ ಈ ಸೀರಿಯಲ್‌, 14ನೇ ವಾರ 7.1 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ. ಆದರೆ, ಖುಷಿಕೊಡುವಂಥ ಟಿಆರ್‌ಪಿ ನಂಬರ್‌ ಸಿಕ್ಕಿಲ್ಲ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಸೀರಿಯಲ್‌ಗಳಿಗೆ 8.0 ಪ್ಲಸ್ ಟಿಆರ್‌ಪಿ ಸಿಗುತ್ತ...