Bengaluru, ಫೆಬ್ರವರಿ 14 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ಸಿದ್ದೇಗೌಡ ಮತ್ತು ಭಾವನಾ ದಂಪತಿ ನಡುವೆ ಮತ್ತೆ ಸರಸ ಮೂಡುವ ಲಕ್ಷಣ ಕಾಣಿಸುತ್ತಿದೆ. ಆದರೆ ಮಧ್ಯೆ ಸೌಪರ್ಣಿಕ ಫೋನ್ ಕರೆ ಮಾಡಿ, ಕೇಸ್ ವಿಚಾರ ಪ್ರಸ್ತಾಪಿಸಿದ್ದಾಳೆ, ಅದಕ್ಕೆ ಭಾವನಾ, ಮಾವ ಜವರೇಗೌಡ್ರು ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಕೇಸ್ ಬೇಗ ವಿಚಾರಣೆ ನಡೆಯಬಹುದು ಎಂದು ಹೇಳುತ್ತಾಳೆ. ನಂತರ ಖುಷಿಯ ಜತೆ ಮಾತನಾಡಿ ಎಂದು ಅವಳಿಗೆ ಫೋನ್ ಕೊಡುತ್ತಾಳೆ, ಅಲ್ಲಿಯೇ ಇದ್ದ ಸಿದ್ದೇಗೌಡನಿಗೆ ಇವರ ಮಾತು ಕೇಳಿ ಮತ್ತೆ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಆದರೂ ಆತ ಅದನ್ನು ತೋರಿಸದೆ ಸುಮ್ಮನಾಗುತ್ತಾನೆ. ಇನ್ನೊಂದು ಕಡೆಯಲ್ಲಿ ಮರಿಗೌಡನ ಜತೆ ಹೆಂಡತಿ ನೀಲು, ಒಗಟು ಒಗಟಾಗಿ ಮಾತನಾಡುತ್ತಾಳೆ. ಆಗ ಆತನಿಗೆ ಇವಳಿಗೆ ಎಲ್ಲ ವಿಷಯ ತಿಳಿದಿದೆ ಎಂದು ಹೆದರುತ್ತಾನೆ.

ಮತ್ತೊಂದೆಡೆ ಲಕ್ಷ್ಮೀ ನಿವಾಸದಲ್ಲಿ ಬಹಳ ದೊಡ್ಡ ಅವಾಂತರ ನಡೆದಿದೆ. ಲಕ್ಷ್ಮೀ ದಂಪತಿ ಮನೆ ಬಿಟ್ಟು ಹೋಗಿದ್ದಾರೆ...