Bangalore, ಮಾರ್ಚ್ 12 -- ರಾಜಾ ಹರಿಶ್ಚಂದ್ರನನ್ನು ಸೋಲಿಸಲು ಆಗದಿದ್ದರೆ, ಮದ್ಯಸೇವಿಸುತ್ತ ದಕ್ಷಿಣಕ್ಕೆ ಮುಖಮಾಡಿ ಹೊರಟು ಹೋಗುತ್ತೇನೆಂದು ವಿಶ್ವಾಮಿತ್ರನು ಪ್ರತಿಜ್ಞೆ ಮಾಡುವುದುಂಟು. ದಕ್ಷಿಣವು ಅಪಶಕುನದ ದಿಕ್ಕೇ?

ಈಚೆಗೆ ಕೇಂದ್ರದ ಶಿಕ್ಷಣ ಮಂತ್ರಿಗಳು ಪಾರ್ಲಿಮೆಂಟಲ್ಲಿ ತಮಿಳುನಾಡಿನ ಬಗ್ಗೆ ಮಾತಾಡುತ್ತ, ಅನಾಗರಿಕ ಎಂಬ ಶಬ್ದ ಬಳಸಿದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಂತ್ರಿಯವರು ತಾವು ಬಳಸಿದ ಶಬ್ದವನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಕ್ಷಮೆ ಕೇಳಿದ್ದಾರೆ. ಇದು ಒಳ್ಳೆಯದು. ಆದರೆ ಈ ಪ್ರಕರಣವು, ಉತ್ತರ ಭಾರತೀಯರ ಮನಸ್ಸಿನೊಳಗೆ ದಕ್ಷಿಣಭಾರತ, ಕಪ್ಪುಬಣ್ಣ ಮತ್ತು ದ್ರಾವಿಡ ಭಾಷೆಗಳನ್ನು ಕುರಿತು ಲಾಗಾಯ್ತಿನಿಂದಲೂ ಸುಪ್ತ ಪ್ರಜ್ಞೆಯಲ್ಲಿರುವ ಗ್ರಹೀತವು ಇನ್ನೂ ತೊಲಗಿಲ್ಲದಿರುವುದನ್ನು ಸೂಚಿಸುವ ಪ್ರಕರಣವೂ ಆಗಿದೆ. ಈ ಹಿಂದೆ ತರುಣ್ ವಿಜಯ್ ಎಂಬ ಮಂತ್ರಿ, ಪಾರ್ಲಿಮೆಂಟಿನಲ್ಲಿ ಅಸಹನೆ ಹೆಚ್ಚುತ್ತಿರುವ ಕುರಿತು ಮಾತಾಡುತ್ತ ' ನೋಡಿ ನಮಗೆ ಅಸಹನೆ ಇದೆ ಎನ್ನುತ್ತೀರಿ.‌ ಆದರೆ ನಾವು ತಮಿಳರೊಂದಿಗೆ ಇಷ್ಟುದಿನದಿಂದ...