ಭಾರತ, ಏಪ್ರಿಲ್ 24 -- ಒಣಮೆಣಸು ಹಾಗೂ ಟೊಮೆಟೊದ ಮೂಲ ವಿದೇಶ. ಭಾರತ ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಯಲ್ಲಿ ಈ ಎರಡು ಇಲ್ಲ ಎಂದಾದರೆ ಆ ಅಡುಗೆಯನ್ನು ಕಲ್ಪಿಸಿಕೊಳ್ಳಲು ಕೂಡ ಅಸಾಧ್ಯ. ಭಾರತೀಯರು ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುವುದರಲ್ಲಿ ನಿಪುಣರು. ದೇಶ, ರಾಜ್ಯ, ಜಿಲ್ಲೆಗಳಲ್ಲಿ ತಮ್ಮದೇ ಶೈಲಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಕೇವಲ ಸಾಂಬಾರ್ ಒಂದರಲ್ಲೇ ಹಲವಾರು ಬಗೆಗಳಿವೆ. ಪನ್ನೀರ್‌ನಿಂದ ಹಿಡಿದು ಬೆಂಡೆಕಾಯಿ, ತೊಂಡೆಕಾಯಿ ಮುಂತಾದ ತರಕಾರಿಗಳಿಂದ ಹಲವು ರೀತಿಯ ರುಚಿಕರವಾದ ಸಾಂಬಾರ್ ಅನ್ನು ತಯಾರಿಸಲಾಗುತ್ತದೆ. ಚಪಾತಿ, ರೊಟ್ಟಿ, ಅನ್ನದ ಜೊತೆ ಸಾಂಬಾರ್ ಅನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತೇವೆ. ನೀವು ದಿನನಿತ್ಯ ಊಟದ ಜೊತೆ ಸೇವಿಸುವ ಸಾಂಬಾರ್ ಯಾವಾಗ ಅಸ್ತಿತ್ವಕ್ಕೆ ಬಂತು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ?

ಸೆಲೆಬ್ರಿಟಿ ಬಾಣಸಿಗ ಕುನಾಲ್ ಕಪೂರ್ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ, ಬದನೆಕಾಯಿ ಸಾಂಬಾರ್ ಸುಮಾರು 4000 ವರ್ಷಗಳಷ್ಟು ಹಳೆಯದು ...