Bengaluru, ಮಾರ್ಚ್ 25 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 24ರ ಸಂಚಿಕೆಯಲ್ಲಿ ಭಾವನಾ ಮತ್ತು ಸಿದ್ದೇಗೌಡ ದಂಪತಿ ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದಾರೆ. ಅವರಿಬ್ಬರೂ ಹೋಟೆಲ್ ರೂಮ್ ಪ್ರವೇಶಿಸುವಷ್ಟರಲ್ಲಿ ಅದನ್ನು ಸಿಂಗರಿಸಿರುವುದು ಗಮನಕ್ಕೆ ಬಂದಿದೆ. ಹನಿಮೂನ್‌ಗಾಗಿ ಕೋಣೆಯನ್ನು ಸಿಂಗರಿಸಿರುವುದನ್ನು ಕಂಡು ಸಿದ್ದೇಗೌಡ ದಂಗಾಗಿದ್ದಾನೆ. ಅಲ್ಲದೇ ಭಾವನಾಗೂ ಒಮ್ಮೆ ದಿಗಿಲು ಉಂಟಾಗಿದೆ. ಕೋಣೆಯ ಮಧ್ಯದಲ್ಲಿರುವ ಮಂಚದಲ್ಲಿ ಗುಲಾಬಿ ಹೂವಿನ ಪಕಳೆಗಳಿಂದ ಹೃದಯದಾಕಾರವನ್ನು ರಚಿಸಲಾಗಿದೆ. ಜತೆಗೆ, ಕೋಣೆಯ ತುಂಬೆಲ್ಲ ಕೆಂಪು ಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿದೆ. ಅದನ್ನು ನೋಡಿ ಸಿದ್ದೇಗೌಡ, ಅಯ್ಯೋ, ಇದೆಲ್ಲ ನಮ್ಮಪ್ಪ ಇಷ್ಟೆಲ್ಲಾ ವ್ಯವಸ್ಥೆ ಮಾಡಿದ್ದಾ ಎಂದು ತಲೆ ಕೆರೆದುಕೊಂಡಿದ್ದಾನೆ.

ಕೂಡಲೇ ಸಿದ್ದೇಗೌಡ, ಹೋಟೆಲ್ ರಿಸೆಪ್ಷನ್‌ಗೆ ಕರೆ ಮಾಡಿ ವಿಚಾರಿಸಿದ್ದಾನೆ. ಇದನ್ನೆಲ್ಲಾ ಯಾರು ಮಾಡೋಕೆ ಹೇಳಿದ್ದು, ನಮಗೆ ಇದೆಲ್ಲ ಬೇಡವಾಗಿತ್ತು ಎಂದಿದ್ದಾನೆ, ಅದಕ್ಕೆ ಹೋಟೆಲ್‌ನವರು, ಇ...