ಭಾರತ, ಮೇ 11 -- ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸ್‌ ಆಗುವುದು ಹಲವರ ಕನಸು. ಹಾಗಂತಾ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವದು ಹಾಗೂ ರ‍್ಯಾಂಕ್‌ ಪಡೆಯುವುದು ಅಷ್ಟು ಸುಲಭವಲ್ಲ. ಇದಕ್ಕೆ ನಿರಂತ ಓದು ಹಾಗೂ ಸತತ ಪ್ರಯತ್ನ ಅಗತ್ಯ. ಹುಬ್ಬಳ್ಳಿಯವರಾದ ಡಾ.ಇಶಿಕಾ ಸಿಂಗ್‌ ಅವರು, ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್‌ ಪಡೆದಿದ್ದಾರೆ. ಅಲ್ಲದೆ ಸಂದರ್ಶನದಲ್ಲಿ ದೇಶಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಉನ್ನತ ಸಾಧನೆ ಮಾಡಿರುವ ಇಶಿಕಾ ಸಿಂಗ್, ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ಕೆಲವೊಂದು ಟಿಪ್ಸ್‌ ಹಂಚಿಕೊಂಡಿದ್ದಾರೆ.

ಕರ್ನಾಟಕ ವಾಣಿಜ್ಯ ನಗರಿ ಹುಬ್ಬಳ್ಳಿಯ ಅಕ್ಷಯ ಕಾಲೊನಿಯ ನಿವಾಸಿಯಾಗಿರುವ ಇಶಿಕಾ ಸಿಂಗ್‌, ಮೂಲತಃ ಜಾರ್ಖಂಡ್‌ನ ಜೆಮ್‌ಶೆಡ್‌ಪುರದವರು. ಕಳೆದ 28 ವರ್ಷಗಳಿಂದ ಇವರ ಕುಟುಂಬ ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಿದೆ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಬಿಬಿಎಸ್‌ ಪದವಿ ಪಡೆದಿರುವ ಇಶಿಕಾ, ಬಾಲ್ಯದಿಂದಲೂ ಓದಿದ್ದು ಹು...