Bangalore, ಏಪ್ರಿಲ್ 24 -- ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಾವಿನ ಹಣ್ಣಿನ ಸೀಸನ್‌ ಆರಂಭವಾಗಿದೆ. ಈಗಾಗಲೇ ಬಾದಾಮಿ, ಸಿಂಧೂರ, ಮೊದಲಾದ ತಳಿಗಳ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಬಹುದು. ಆದರೆ ರೈತರಿಗೆ ನೂರರಷ್ಟು ಖುಷಿ ತಂದಿದೆ ಎಂದು ಹೇಳುವಂತಿಲ್ಲ. ಮಾವಿನ ಹಣ್ಣಿನ ಗುಣಮಟ್ಟ ಉತ್ತಮವಾಗಿದೆ. ಆದರೆ ಇಳುವರಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗಿದೆ. ಇಳುವರಿ ಕಡಿಮೆಯಾಗಲು ಕಾರಣ ಹುಡುಕಿದಾಗ ಈ ವರ್ಷ 8-10 ಲಕ್ಷ ಮೆಟ್ರಿಕ್‌ ಟನ್‌ಇಳುವರಿ ನಿರೀಕ್ಷಿಸಲಾಗಿದೆ. ಆದರೆ ಕಳೆದ ವರ್ಷ 12-15 ಲಕ್ಷ ಟನ್‌ ಇಳುವರಿ ಬಂದಿತ್ತು. ಹೂ ಕಟ್ಟಿದಾಗ ಆದ ವಾತಾವರಣ ಏರುಪೇರು, ಹಣ್ಣು ಬಿಡುವಾಗ ಹೆಚ್ಚಿದ ತಾಪಮಾನ ಮತ್ತು ಕೆಲವು ರೋಗಳ ಕಾರಣಗಳಿಗಾಗಿ ಇಳುವರಿ ಕಡಿಮೆಯಾಗಿದೆ ಎಂದು ಹೇಳುತ್ತಾರೆ.

ರಾಜ್ಯದಲ್ಲಿ 2.8 ರೈತರು ಸುಮಾರು 1.5 ಲಕ್ಷ ಹೆಕ್ಟೇರ್‌ ನಲ್ಲಿ ಮಾವು ಬೆಳೆದಿದ್ದಾರೆ. ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ.60 ರಷ್ಟು ಮಾವು ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ...