ಭಾರತ, ಏಪ್ರಿಲ್ 6 -- ಉಡುಪಿ: ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಬಳಿ ಏಪ್ರಿಲ್ 5ರಂದು ಶನಿವಾರ ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ಅಪಘಾತದಲ್ಲಿ ಮೃತರಾಗಿದ್ದಾರೆ. ಅವರು ತಮ್ಮ 34ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಕುಂದಾಪುರದಲ್ಲೇ ವಾಸ್ತವ್ಯ ಮಾಡುತ್ತಿದ್ದ ನಾರಾಯಣ ಪೂಜಾರಿ ಶಿರೂರಿನ ತೊದಳ್ಳಿಯಲ್ಲಿ ನಡೆಯಬೇಕಿದ್ದ ಯಕ್ಷಗಾನವೊಂದಕ್ಕೆ ತೆರಳುತ್ತಿದ್ದರು. ಆದರೆ, ಮಳೆ ಇರುವ ಕಾರಣ ಯಕ್ಷಗಾನ ರದ್ದಾಗಿದೆ. ಯಕ್ಷಗಾನ ರದ್ದಾದ ಕಾರಣ ಮತ್ತೆ ಮನೆ ಕಡೆ ತೆರಳಬೇಕೆಂದು ನಾರಾಯಣ ಪೂಜಾರಿ ತಮ್ಮ ಬೈಕ್ ಮೂಲಕ ಸಾಗಿದ್ದಾರೆ.

ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರ ನಾರಾಯಣ ಪೂಜಾರಿ ತಮ್ಮ ಮನೆಯತ್ತ ಸಾಗುವಾಗ ಅರಾಟೆ ಸೇತುವೆ ಬಳಿ ದುರಸ್ತಿ ಕಾರ್ಯ ನಡೆಯುತ್ತಿರುವುದನ್ನು ಗಮನಿಸದೆ, ಏಕಮುಖ ಸಂಚಾರ ಮಾಡಿದಲ್ಲಿ ಗೊಂದಲಕ್ಕೊಳಗಾಗಿ ದ್ವಿಮುಖ ಸಂಚಾರ ರಸ್ತೆಯಲ್ಲಿ ಸಾಗಿದ್ದಾರೆ. ಆಗ ಅಲ್ಲಿ ಅಡ್ಡಲಾಗಿ ಹಾಕಿದ್ದ ಮಣ್ಣಿಗೆ ಅವರ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇವರು ತಮ್ಮ ಪತ್ನಿ ಹಾಗೂ ಕುಟುಂಬವನ್ನು ಅಗಲಿ...