ಭಾರತ, ಫೆಬ್ರವರಿ 14 -- ಹೈದರಾಬಾದ್: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರದ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಹಲವೆಡೆ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಖಮ್ಮಂ, ಕರೀಂನಗರ, ನಿಜಾಮಾಬಾದ್, ಕಾಮರೆಡ್ಡಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಭೀತಿಯಿಂದ ಕೋಳಿ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರೋಗ್ಯದ ಕಾಳಜಿಯಿಂದಾಗಿ ಜನರು ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕಿದ್ದಾರೆ. ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಕೂಡಾ ದಿಡೀರ್‌ ಕುಸಿತವಾಗಿದೆ. ಜನರು ಮೀನು ಸೇರಿದಂತೆ ಇತರ ಬದಲಿ ಮಾಂಸಗಳ ಖರೀಸುತ್ತಿದ್ದು, ಕೋಳಿ ಮಾಂಸ ಮಾರಾಟಗಾರರಿಗೆ ಭಾರಿ ನಷ್ಟ ಉಂಟಾಗಿದೆ.

ಇತ್ತೀಚೆಗೆ, ಖಮ್ಮಂ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋಳಿ ಸಾಕಣೆ ಕೇಂದ್ರಗಳಲ್ಲಿ ಸಾವಿರಾರು ಬ್ರಾಯ್ಲರ್ ಕೋಳಿಗಳು ಸಾವನ್ನಪ್ಪಿವೆ. ತೆಲಂಗಾಣದ ಗಡಿಗೆ ಹತ್ತಿರವಿರುವ ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದ್ದು, ಅದೇ ವ...