ಭಾರತ, ಜೂನ್ 11 -- ಪಂಚಮಹಾಪುರುಷ ಯೋಗಗಳಲ್ಲಿ ಹಂಸ ಯೋಗ ಮತ್ತು ಮಾಲವ್ಯ ಯೋಗಗಳು ಬಲು ಮುಖ್ಯವಾಗುತ್ತವೆ. ಹಂಸ ಯೋಗವು ಗುರುಗ್ರಹದಿಂದ ಉಂಟಾಗುತ್ತದೆ. ಗುರುವು ಧನು, ಮೀನ ಅಥವಾ ಕಟಕ ರಾಶಿಗಳಲ್ಲಿ ಇರುವ ವೇಳೆ ಹಂಸ ಯೋಗವು ಉಂಟಾಗುತ್ತದೆ. ಆದರೆ ಗುರುವು ಕೇಂದ್ರ ಸ್ಥಾನಗಳಲ್ಲಿ ಇರಬೇಕು. ಗುರು ಧನು ಅಥವಾ ಮೀನ ರಾಶಿಗಳಲ್ಲಿ ಇದ್ದಾಗ ಮಿಥುನ, ಕನ್ಯಾ, ಧನು ಮತ್ತು ಮೀನ ರಾಶಿಗಳಿಗೆ ಹಂಸಯೋಗ ಇರುತ್ತದೆ. ಗುರುವು ಕಟಕದಲ್ಲಿ ಇದ್ದಲ್ಲಿ ಮೇಷ, ಕಟಕ, ತುಲಾ ಮತ್ತು ಮಕರ ರಾಶಿಗಳಿಗೆ ಹಂಸಯೋಗ ಇರುತ್ತದೆ. ರಾಶಿ ಅಲ್ಲದೆ ಜನ್ಮ ಲಗ್ನಗಳನ್ನು ಸಹ ಪರಿಗಣಿಸಬೇಕಾಗುತ್ತದೆ. ಗುರುವು ಈ 3 ರಾಶಿಗಳಲ್ಲಿ ಬಲಶಾಲಿ ಆಗುತ್ತಾನೆ.

ಮಾಲವ್ಯ ಯೋಗವು ಶುಕ್ರಗ್ರಹದಿಂದ ಉಂಟಾಗುತ್ತದೆ. ಶುಕ್ರನು ವೃಷಭ, ತುಲಾ ಮತ್ತು ಮೀನ ರಾಶಿಗಳಲ್ಲಿ ನೆಲೆಸಿರುವಾಗ ಮಾಲವ್ಯ ಯೋಗವು ಉಂಟಾಗುತ್ತದೆ. ಆದರೆ ಶುಕ್ರನು ಕೇಂದ್ರಸ್ಥಾನಗಳಲ್ಲಿ ನೆಲೆಸಿರಬೇಕು. ಶುಕ್ರನು ವೃಷಭ ರಾಶಿಯಲ್ಲಿ ನೆಲೆಸಿದ್ದಲ್ಲಿ ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಗಳಿಗೆ ಮಾಲವ್ಯ ಯೋಗ ಇರುತ್ತ...