ಭಾರತ, ಏಪ್ರಿಲ್ 25 -- ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಹಂಪಿ ಎಕ್ಸ್‌ಪ್ರೆಸ್ ರೈಲು (16591/ 16592) ಸಂಚಾರ ಮಾರ್ಗದಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ತುಸು ಬದಲಾವಣೆ ಇರಲಿದೆ. ಭಾರತೀಯ ರೈಲ್ವೆಯು ಮೇ ತಿಂಗಳಲ್ಲಿ ಧರ್ಮಾವರಂ ರೈಲು ನಿಲ್ದಾಣದ ಯಾರ್ಡ್ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ಹಾಗೂ ಜೂನ್ ತಿಂಗಳಲ್ಲಿ ಗುಂತಕಲ್ ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣ ಈ ತಾತ್ಕಾಲಿಕ ಮಾರ್ಗ ಬದಲಾವಣೆ ಇರಲಿದೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿವೆ.

ಧರ್ಮಾವರಂ ರೈಲು ನಿಲ್ದಾಣದ ಯಾರ್ಡ್ ನವೀಕರಣ ಕಾಮಗಾರಿ ನಡೆಸುವ ಕಾರಣ, ಮೇ 11 ರಿಂದ 17 ರ ತನಕ ಹಂಪಿ ಎಕ್ಸ್‌ಪ್ರೆಸ್ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಇದರಂತೆ, ಹುಬ್ಬಳ್ಳಿ - ಮೈಸೂರು ಹಂಪಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ 16591) ರೈಲು ಮೇ 11 ರಿಂದ ಮೇ 17 ರ ತನಕ ಬಳ್ಳಾರಿ ಜಂಕ್ಷನ್ , ರಾಯದುರ್ಗ, ಚಿಕ್ಕಜಾಜೂರು, ಅರಸೀಕೆರೆ ಹಾಗೂ ತುಮಕೂರ...