ಭಾರತ, ಮಾರ್ಚ್ 15 -- ಹಾವೇರಿ: ರಟ್ಟೇಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ (22) ಹತ್ಯೆ ಪ್ರಕರಣ ಬಹಳ ತಿರುವು ಪಡೆದುಕೊಂಡಿದೆ. ರಾಣೆಬೆನ್ನೂರು ತಾಲೂಕು ಪತ್ತೇಪುರ ಸಮೀಪ ತುಂಗಭದ್ರಾ ನದಿಯಲ್ಲಿ ಸ್ವಾತಿ ಬ್ಯಾಡಗಿಶವ ಪತ್ತೆಯಾಗಿದ್ದು, ಲವ್‌ ಜಿಹಾದ್ ಆರೋಪ ಕೇಳಿಬಂದಿದೆ. ಆರೋಪಿಗಳ ಬಂಧನಕ್ಕಾಗಿ ಸ್ವಾತಿ ಸಂಬಂಧಿಕರು, ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಸ್ವಾತಿ ಬ್ಯಾಡಗಿ ನಾಪತ್ತೆ ಪ್ರಕರಣ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ನಡುವೆ, ಸ್ವಾತಿಯ ಶವ ಪತ್ತೆಯಾದ ಬಳಿಕ ಕೊಲೆ ಪ್ರಕರಣವನ್ನು ಭೇದಿಸಿರುವ ಹಲಗೇರಿ ಪೊಲೀಸರು, ನಯಾಜ್ ಇಮಾಮ್‌ಸಾಬ್‌ ಬೆಣ್ಣಿಗೇರಿ (28) ಎಂಬಾತನನ್ನು ಬಂಧಿಸಿದ್ದಾರೆ. ಆತನೇ ಕೊಲೆ ಪ್ರಕರಣದ ಮುಖ್ಯ ಆರೋಪಿ. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಈ ಕೊಲೆ ಪ್ರಕರಣದ ತನಿಖೆಯ ವಿವರವನ್ನು ಮಾಧ್ಯಮಗಳ ಹಂಚಿಕೊಂಡಿದ್ಧಾರೆ.

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ, ರಾಣೆಬೆನ್ನೂರಿನ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿದ್ದರು. ಮಾರ್ಚ್ 6ರಂದು ರಾಣೆಬೆನ್ನೂರು ತಾಲೂಕು ಪತ್ತ...