ಭಾರತ, ಏಪ್ರಿಲ್ 1 -- ಥೈರಾಯ್ಡ್ ಸಮಸ್ಯೆ ಇದ್ದಾಗ, ಸಾಮಾನ್ಯವಾಗಿ ಜನರು ರೋಗಲಕ್ಷಣಗಳನ್ನು ಗುರುತಿಸಿ ಪರೀಕ್ಷೆ ಮಾಡಿಸುತ್ತಾರೆ. ಆದರೆ ಗಂಟಲನ್ನು ಪರೀಕ್ಷಿಸುವ ಮೂಲಕ ಮನೆಯಲ್ಲಿಯೇ ನಿಮಗೆ ಥೈರಾಯ್ಡ್ ಸಂಬಂಧಿತ ಸಮಸ್ಯೆ ಇದೆಯೇ ಎಂದು ತಿಳಿದುಕೊಳ್ಳಬಹುದು. ಥೈರಾಯ್ಡ್ ಎಂಬುದು ಚಿಕ್ಕ ತುಳಸಿ ಎಲೆಯ ಆಕಾರದ ಗ್ರಂಥಿಯಾಗಿದ್ದು, ಇದು ಗಂಟಲ ಕೆಳಭಾಗದಲ್ಲಿ, ಕಾಲರ್ಬೋನ್‌ನ ಮೇಲೆ ಮತ್ತು ಧ್ವನಿಪೆಟ್ಟಿಗೆಯ ಕೆಳಗೆ ಇರುತ್ತದೆ. ಥೈರಾಯ್ಡ್ ಗ್ರಂಥಿಯಲ್ಲಿ ಯಾವುದೇ ರೀತಿಯ ಬೆಳವಣಿಗೆ, ನೋಡ್ಯೂಲ್ಸ್, ಗಾಯ್ಟರ್ಸ್ ಅಥವಾ ಥೈರಾಯ್ಡ್ ಕ್ಯಾನ್ಸರ್ ಆಗಬಹುದು.

ಗಂಟಲಿನಲ್ಲಿ ಯಾವುದೇ ರೀತಿಯ ಗೆಡ್ಡೆ ಅಥವಾ ಉಂಡೆಗಳು ಕಾಣಿಸಿಕೊಂಡರೆ ಅವು ಥೈರಾಯ್ಡ್ ಸಂಬಂಧಿತವಾಗಿರಬಹುದು. ಆದ್ದರಿಂದ ಗಂಟಲನ್ನು ಪರೀಕ್ಷಿಸುವ ಮೂಲಕ ಮನೆಯಲ್ಲಿಯೇ ಥೈರಾಯ್ಡ್ ಸಮಸ್ಯೆಯನ್ನು ಪತ್ತೆಹಚ್ಚಬಹುದು. ಆದರೆ, ಮನೆಯಲ್ಲಿ ಮಾಡಿದ ಗಂಟಲಿನ ಪರೀಕ್ಷೆಯು ನಿಖರವಾಗಿರುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಥೈರಾಯ್ಡ್ ರೋಗ ಇರಬಹುದು ಅಥವಾ ಗಂಟಲಿನಲ್ಲಿ ಕಾಣಿಸುವ ಬೆಳವಣ...