ಭಾರತ, ಜೂನ್ 7 -- ನಾವು ದಿನನಿತ್ಯ ಮಾಡುವ ಚಟುವಟಿಕೆಗಳು ಕನಸಿನಲ್ಲಿ ಕಾಣುತ್ತೇವೆ. ಕನಸಿನಲ್ಲಿ ಕಾಣುವ ಪ್ರತಿಯೊಂದು ಚಟುವಟಿಕೆಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಕನಸಿನಲ್ಲಿ ನಾವು ಬಲಮೊಗ್ಗುಲಲ್ಲಿ ಎದ್ದಲ್ಲಿ ಹೊಸ ಕೆಲಸವೊಂದು ಆರಂಭವಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಕೆಲವೊಮ್ಮೆ ಬಲಮುಗ್ಗಲಲ್ಲಿ ಎದ್ದು ಪುನಃ ಮಲಗಿ ಕೊಂಡರೆ ಆರಂಭಿಸಿದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಬಲ ಮೊಗ್ಗಲಲ್ಲಿ ಎದ್ದು ಮಲಗಿ ಪುನಃ ಎಡಮೊಗ್ಗಲಲ್ಲಿ ಎದ್ದರೆ, ನೀವು ಆರಂಭಿಸುವ ಕೆಲಸ ಕಾರ್ಯಗಳಿಗೆ ಕುಟುಂಬದ ಹಿರಿಯರ ಸಹಾಯ ದೊರೆಯುತ್ತದೆ. ಅಥವಾ ಕುಟುಂಬದ ಹಿರಿಯರು ಮಾಡುತ್ತಿದ್ದ ಕೆಲಸವೊಂದನ್ನು ಅನುಸರಿಸುವಿರಿ. ಕನಸಿನಲ್ಲಿ ಬಲ ಅಥವಾ ಎಡಮೊಗ್ಗಲಲ್ಲಿ ಮೇಲೇಳದೆ ಅಂಗಾತವಾಗಿ ಎದ್ದರೆ, ಇಂದಿನ ಕೆಲಸ ಕಾರ್ಯಗಳನ್ನು ಆತುರದಿಂದ ಪೂರ್ಣಗೊಳಿಸುವಿರೆಂಬ ಅರ್ಥ ಬರುತ್ತದೆ.

ಇದೇ ರೀತಿ ಕನಸಿನಲ್ಲಿ ಮೇಲೇಳದೆ ಬೋರಲಾಗಿ ಮಲಗಿಕೊಂಡರೆ ನೀವು ಆರಂಭಿಸುವ ಕೆಲಸ ಕಾರ್ಯಗಳು ಆತುರದ ಮನಸ್ಥಿತಿಯ ಕಾರಣ ಅಪೂರ್ಣಗೊಳ್ಳುವುದಲ್ಲದೆ ನಿಮ್ಮ ಪ್ರಯತ್ನಗ...